ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಐ ಫೋನ್ ಖರೀದಿಸಲು ಕಿಡ್ನಿ ಮಾರಲು ಹೋಗಿ ಸಿಕ್ಕಿ ಬಿದ್ದ ಭೂಪರು

ತ್ತೀಚೆಗೆ ಬಿಡುಗಡೆ ಮಾಡಿರುವ ಐಫೋನ್‌ 6ಎಸ್‌ ಖರೀದಿಸಲು ಹಣವಿಲ್ಲದ ಚೀನಾದ ಜೈಂಗ್ಸು ಪ್ರಾಂತ್ಯದ ಇಬ್ಬರು ಕಿಡ್ನಿ ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದ...

ಸಾಂದರ್ಭಿಕ ಚಿತ್ರ
Shilpa D
Updated On : 15 Sept 2015, 5:14 am

ಬೀಜಿಂಗ್ : ಇತ್ತೀಚೆಗೆ ಬಿಡುಗಡೆ ಮಾಡಿರುವ ಐಫೋನ್‌ 6ಎಸ್‌ ಖರೀದಿಸಲು ಹಣವಿಲ್ಲದ ಚೀನಾದ ಜೈಂಗ್ಸು ಪ್ರಾಂತ್ಯದ ಇಬ್ಬರು ಕಿಡ್ನಿ ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಆಘಾತಕಾರಿ ಘಟನೆ ವರದಿ ಆಗಿದೆ.

ಐಫೋನ್‌ 6ಎಸ್‌ ಖರೀದಿಸಲು ಬೇಕಾದಷ್ಟು ಹಣ ಇಲ್ಲವೆಂದು  'ವು' ಎಂಬಾತ ಸ್ನೇಹಿತ ಹುವಾಂಗ್‌ಗೆ ಈ ವಿಷಯ ತಿಳಿಸಿದ್ದ. ಇದಕ್ಕೆ ಆತ ಕಿಡ್ನಿ ಮಾರಾಟ ಮಾಡಿ ಹಣ ಗಳಿಸುವಂತೆ ಸ್ನೇಹಿತನಿಗೆ ಸಲಹೆ ನೀಡಿದ್ದ ಎಂದು ಚೀನಾ ಡೈಲಿ ಆನ್ ವರದಿ ಮಾಡಿದೆ.

ಇಂಟರ್ನೆಟ್‌ ಮೂಲಕ ಕಿಡ್ನಿ ಮಾರಾಟ ಮಾಡುವ ಏಜೆಂಟ್‌ ಅನ್ನು ಪರಿಚಯ ಮಾಡಿಕೊಂಡ ಇಬ್ಬರು, ಆತನ ಸೂಚನೆ ಮೇರೆಗೆ ಸೆಪ್ಟೆಂಬರ್‌ 12ರಂದು ವೈದ್ಯಕೀಯ ತಪಾಸಣೆಗಾಗಿ ನಾನ್‌ಜಿಂಗ್‌ ಆಸ್ಪತ್ರೆಗೆ ಬಂದಿದ್ದರು. ಆದರೆ, ಏಜೆಂಟ್‌ ಆ ದಿನ ಆಸ್ಪತ್ರೆಗೆ ಬರಲಿಲ್ಲ. ನಂತರ ಕಿಡ್ನಿ ಮಾರಾಟ ಮಾಡುವ ನಿರ್ಧಾರವನ್ನು ವು ಎಂಬಾತ ಬದಲಿಸಿದ. ಆದರೆ, ಸ್ನೇಹಿತ ಹುವಾಂಗ್‌ ಅದಕ್ಕೆ ಸಮ್ಮತಿಸಲಿಲ್ಲ. ಇದರಿಂದ ಬೇಸತ್ತ ವು ಪೊಲೀಸರ ಮೊರೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ . ಸದ್ಯ ತಲೆಮರೆಸಿಕೊಂಡಿರುವ ಹುವಾಂಗ್‌ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments