ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ 
ವಿದೇಶ

ವಿಶ್ವ ಶಿಕ್ಷಣ ಮ್ಯಾಪಲ್ಲಿ ಬೆಂಗಳೂರಿನ ಐಐಎಸ್ಸಿ

ವಿಶ್ವದ ಅತ್ಯುತ್ತಮ 200 ವಿವಿಗಳಲ್ಲಿ ಭಾರತದ 2 ವಿದ್ಯಾಸಂಸ್ಥೆಗಳು ಸ್ಥಾನ ಪಡೆದಿವೆ. ಇದೇ ಮೊದಲ ಬಾರಿಗೆ ದೇಶದ ಶೈಕ್ಷಣಿಕ...

ಲಂಡನ್: ವಿಶ್ವದ ಅತ್ಯುತ್ತಮ 200 ವಿವಿಗಳಲ್ಲಿ ಭಾರತದ 2 ವಿದ್ಯಾಸಂಸ್ಥೆಗಳು ಸ್ಥಾನ ಪಡೆದಿವೆ. ಇದೇ ಮೊದಲ ಬಾರಿಗೆ ದೇಶದ ಶೈಕ್ಷಣಿಕ ಸಂಸ್ಥೆಗಳು ಇಂಥ ಸಾಧನೆ ಮಾಡಿವೆ.

ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಗೆ 147 ಮತ್ತು ದೆಹಲಿಯಲ್ಲಿರುವ ಐಐಟಿ 179ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 235ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ ಉತ್ತಮ ಸಾಧನೆ ಮಾಡಿದೆ. ಕ್ಯೂಎಸ್ ವಲ್ರ್ಡ್ ಯುನಿವರ್ಸಿಟಿ ರ್ಯಾಂಕಿಂಗ್‍ನ ಪ್ರಸಕ್ತ ಸಾಲಿನ ಮೌಲ್ಯಮಾಪನದ ಪ್ರಕಾರ ಈ ದೇಶದ ಶಿಕ್ಷಣ ಸಂಸ್ಥೆಗಳಿಗೆ ಈ ಗೌರವ ಪ್ರಾಪ್ತಿಯಾಗಿದೆ.

ಈ ಪಟ್ಟಿಯ ಪ್ರಕಾರ ದೇಶದ 14 ಶಿಕ್ಷಣ ಸಂಸೆಟಛಿಗಳು ವಿಶ್ವದಲ್ಲೇ ಅತ್ಯುತ್ತಮ ವಿದ್ಯಾಸಂಸ್ಥೆಗಳಾಗಿವೆ. ಮೊದಲ ಸ್ಥಾನದಲ್ಲಿ ಮೆಸಾಚ್ಯುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮೊದಲ ಸ್ಥಾನ, ಹಾರ್ವರ್ಡ್ ವಿವಿ ದ್ವಿತೀಯ, ಸ್ಟ್ಯಾನ್ ಫೋರ್ಡ್ ವಿವಿ ತೃತೀಯ ಸ್ಥಾನ ಪಡಕೊಂಡಿದೆ.

34 ರಾಷ್ಟ್ರಗಳ 200 ವಿದ್ಯಾಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಪಟ್ಟಿಯಲ್ಲಿ 30 ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಅಮೆರಿಕ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ಐಐಎಸ್ಸಿ 147ನೇ ಸ್ಥಾನಗಳಿಸಿರುವುದಕ್ಕೆ ಸಂಸ್ಥೆಯ ಕಾರ್ಯ ವೈಖರಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!