ಭಾರತೀಯನಿಗೆ ಸೌದಿ ಇಂಜಿನಿಯರ್‌ನಿಂದ ಥಳಿತ (ವೀಡಿಯೋ ದೃಶ್ಯ) 
ವಿದೇಶ

ಭಾರತೀಯನಿಗೆ ಸೌದಿ ಇಂಜಿನಿಯರ್‌ನಿಂದ ಥಳಿತ; ವೈರಲ್ ಆಗುತ್ತಿದೆ ವೀಡಿಯೋ

ಮೆಕ್ಕಾದಲ್ಲಿ ಸೌದಿ ಇಂಜಿನಿಯರ್‌ನೊಬ್ಬ ಭಾರತದ ಕಾರ್ಮಿಕನಿಗೆ ಹಿಗ್ಗಾಮುಗ್ಗ ಥಳಿಸುತ್ತಿರುವ ವೀಡಿಯೋ ನಿನ್ನೆ ಫೇಸ್‌ಬುಕ್‌ನಲ್ಲಿ...

ಮೆಕ್ಕಾ: ಮಧ್ಯಪ್ರಾಚ್ಯದಲ್ಲಿ ಭಾರತೀಯ ಕಾರ್ಮಿಕರು ಹಲವಾರು ರೀತಿಯಲ್ಲಿ ಹಿಂಸೆಗೊಳಗಾಗುತ್ತಿದ್ದಾರೆ ಎಂಬುದು ನಿಜ ಸಂಗತಿ. ಭಾರತದಿಂದ ಸಾವಿರಾರು ಜನರು ಕೂಲಿ ಕೆಲಸ, ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಸೌದಿ ಅರೇಬಿಯಾಗೆ ಹೋಗುತ್ತಿದ್ದಾರೆ. ಅಲ್ಲಿ ಅವರ ಜೀವನ ಕಷ್ಟಕರವಾಗಿದ್ದರೂ, ಮನೆಯಲ್ಲಿನ ಬಡತನ ನೀಗಿಸಲು ಎಲ್ಲ ಕಷ್ಟಗಳನ್ನು ಅವರು ಸಹಿಸುತ್ತಿರುತ್ತಾರೆ.
ಮೆಕ್ಕಾದಲ್ಲಿ ಸೌದಿ ಇಂಜಿನಿಯರ್‌ನೊಬ್ಬ ಭಾರತದ ಕಾರ್ಮಿಕನಿಗೆ ಹಿಗ್ಗಾಮುಗ್ಗ ಥಳಿಸುತ್ತಿರುವ ವೀಡಿಯೋ ನಿನ್ನೆ  ಫೇಸ್‌ಬುಕ್‌ನಲ್ಲಿ ಹರಿದಾಡಿತ್ತು.
ಕಾರ್ಮಿಕ ಕ್ಷಮೆಯಾಚಿಸುತ್ತಿದ್ದರೂ ರಾಕ್ಷಸನಂತೆ ಥಳಿಸುತ್ತಿರುವ ಸೌದಿ ಇಂಜಿನಿಯರ್. ಎರಡು ನಿಮಿಷ ಅವಧಿಯಿರುವ ಈ ವಿಡಿಯೋದಲ್ಲಿ ಇಂಜಿನಿಯರ್ ಯಾವುದೇ ದಯೆ ದಾಕ್ಷಿಣ್ಯವಿಲ್ಲದೆ ಕಾರ್ಮಿಕನಿಗೆ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ.
ಕೆನಡಾದ ಪತ್ರಕರ್ತ ತರೇಖ್ ಫತಾಹ್ ಫೇಸ್‌ಬುಕ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
ಸುದ್ದಿಮೂಲಗಳ ಪ್ರಕಾರ ಈ ವೀಡಿಯೋ ಈಗ ಸೌದಿ ಅರೇಬಿಯಾದಲ್ಲೂ ಚರ್ಚಾ ವಿಷಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!