ವಿದೇಶ

ನಾರುತ್ತಿದ್ದ ಶೂಗಳಿಗಾಗಿ ಭಾರತೀಯ ಮೂಲದವನಿಗೆ ಇರಿದ ಫಿಲಿಫಿನೋ

Guruprasad Narayana

ಮಿಲನ್: ಫಿಲಿಫಿನ್ಸ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಮನುಷ್ಯನ ಶೂಗಳು ಕೊಳೆತು ನಾರುತ್ತಿವೆ ಎಂದು ದೂರಿ ವಸತಿಸಮುಚ್ಚಯದಲ್ಲಿ ವಾಸಿಸುತ್ತಿದ್ದ ಫಿಲ್ಲಿಫಿನ್ಸ್ ವ್ಯಕ್ತಿ ಚಾಕುವಿನಿಂದ ಇರಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ೧೯ ವರ್ಷದ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

೪೭ ವರ್ಷದ ಸಂತ್ರಸ್ತನನ್ನು ಎ.ಎಸ್ ಎಂದು ಗುರುತಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಅವರು ನಾಲ್ಕು ಹೃದಯಾಘಾತಗಳಿಗೆ ಒಳಪಟ್ಟಿದ್ದರಿಂದ ಮಿಲನ್ ನ ನಿಗುರಾಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎದೆ ಮತ್ತು ಭುಜದ ಮೇಲೆ ಇರಿದಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನುಷ್ಯನನ್ನು ಪೊಲೀಸರು ಕಂಡುಹಿಡಿದಿದ್ದಾರೆ. ಇಟಲಿ ಮೂಲದ ಫಿಲಿಫಿನೋ, ರೆಂಜೋ ಮಿಕಲ್ಯಾಟ್ ತಲೆತಪ್ಪಿಸಿಕೊಂಡಿದ್ದ ಮತ್ತು ದಾಳಿಗೆ ಬಳಸಿದ್ದ ಚಾಕುವನ್ನು ತೊಳೆದಿದ್ದು, ತನ್ನ ರಕ್ತಸಿಕ್ತ ಬಟ್ಟೆಯನ್ನು ಬದಲಾಯಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

SCROLL FOR NEXT