ವಿದೇಶ

ಪ್ರಧಾನಿ ಮೋದಿಗೆ ಯೂ ಟ್ಯೂಬ್ ನಲ್ಲಿ ಸ್ವಾಗತ ಕೋರಿದ ಸುಂದರ್ ಪಿಚ್ಚೈ

Shilpa D

ಕ್ಯಾಲಿಫೋರ್ನಿಯಾ: 5 ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಗೂಗಲ್‌ ಸಿಇಓ ಸುಂದರ್‌ ಪಿಚೈ ಯೂಟ್ಯೂಬ್‌ ನಲ್ಲಿ ಸಿಲಿಕಾನ್‌ ವ್ಯಾಲಿಗೆ ಸ್ವಾಗತ ಕೋರಿದ್ದಾರೆ.

ಮೋದಿ ಅವರ ಭೇಟಿ ಅಮೆರಿಕದಲ್ಲಿರುವ ಭಾರತೀಯರು ಹಾಗೂ ಗೂಗಲ್‌ ಬಳಕೆದಾರರಲ್ಲಿ ಸಂಚಲನ ಮೂಡಿಸಿದೆ,' ಎಂದು ಭಾರತೀಯ ಮೂಲದ ಗೂಗಲ್ ಸಿಇಓ ಸುಂದರ್ ಪಿಚ್ಚೈ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಭೇಟಿ ಸಿಲಿಕಾನ್‌ ವ್ಯಾಲಿ ಜನರಲ್ಲಿ ಹುರುಪು ತುಂಬುವುದೆಂದು ಆಶಿಸುತ್ತೇನೆ,' ಎಂದು ಹೇಳಿದ್ದಾರೆ.

ಮುಂದಿನ ಕೆಲ ವರ್ಷಗಳಲ್ಲಿ 50 ಮಿಲಿಯನ್ ಜನರು ಮೊದಲ ಬಾರಿಗೆ ಆನ್ ಲೈನ್ ಸೇವೆ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

SCROLL FOR NEXT