ಅಮೆರಿಕಾದ ಸಿಇಒ ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ 
ವಿದೇಶ

ಮೋದಿ ಭೇಟಿ ವೇಳೆ 4 ಜಿ ವಿಸ್ತರಣೆ, ಡಿಜಿಟಲೀಕರಣಕ್ಕೆ ಅಮೇರಿಕಾದ ಮಾಧ್ಯಮ ಸಿಇಒಗಳ ಸಲಹೆ

ಅಮೆರಿಕಾದ ಮಾಧ್ಯಮ ಹಾಗೂ ಮನೋರಂಜನಾ ವಾಹಿನಿಗಳ ಸಿಇಒ ಗಳು 4 ಜಿ ನೆಟ್ವರ್ಕ್ ನ ಶೀಘ್ರಗತಿಯ ವಿಸ್ತರಣೆ ಹಾಗೂ ಟಿವಿ ಡಿಜಿಟೈಸೇಷನ್ ಗೆ ಸಲಹೆ ನೀಡಿದ್ದಾರೆ.

ನ್ಯೂಯಾರ್ಕ್: ಅಮೆರಿಕಾದ ಸಿಇಒ ಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಅಲ್ಲಿನ ಮಾಧ್ಯಮ ಹಾಗೂ ಮನೋರಂಜನಾ ವಾಹಿನಿಗಳ ಸಿಇಒ ಗಳು 4 ಜಿ ನೆಟ್ವರ್ಕ್ ನ ಶೀಘ್ರಗತಿಯ ವಿಸ್ತರಣೆ ಹಾಗೂ ಟಿವಿ ಡಿಜಿಟೈಸೇಷನ್ ಗೆ ಸಲಹೆ ನೀಡಿದ್ದಾರೆ.

ನ್ಯೂಸ್ ಕಾರ್ಪ್ ನ ರೂಪರ್ಟ್ ಮುರ್ಡೋಕ್, ಸೋನಿ ಎಂಟರ್ಟೇನ್ ಮೆಂಟ್ ನ ಮೈಕೇಲ್ ಲಿಂಟನ್, ಡಿಸ್ಕವರಿ ಕಮ್ಯುನಿಕೇಶನ್ಸ್ ನ ಡೇವಿಡ್ ಜಸ್ಲಾವ್ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಡಿಜಿಟಲ್ ಮೂಲಸೌಕರ್ಯವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.

4  ಜಿ ನೆಟ್ವರ್ಕ್ ವಿಸ್ತರಣೆ ಹಾಗೂ ಟಿವಿ ಡಿಜಿಟಲೀಕರಣದಿಂದ ಮಾಧ್ಯಮ ಹಾಗೂ ಮನೋರಂಜನಾ ಕ್ಷೇತ್ರ ಭಾರತದಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿ ಮಾಡಲಿದೆ ಎಂದು ಸಿಇಒ ಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಚುರುಕು, ಕ್ರಿಯಾತ್ಮಕ ನಾಯಕತ್ವಕ್ಕೆ ಸಿಇಒ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಇಂಡಿಯಾ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭೌತಿಕ ಮೂಲ ಸೌಕರ್ಯದೊಂದಿಗೆ, ಡಿಜಿಟಲ್ ಮೂಲಸೌಕರ್ಯವೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT