ವಿದೇಶ

ಕೃತಕ ತಾಯ್ತನಕ್ಕೆ ಭಾರಿ ಡಿಮ್ಯಾಂಡು!

Sumana Upadhyaya

ಲಂಡನ್: ಕನ್ಯೆಯಾಗಿದ್ದುಕೊಂಡೇ ತಾಯ್ತನ ಪಡೆಯುವ ಹಂಬಲ ವಿದೇಶಗಳಲ್ಲಿ ಇದೀಗ ಟ್ರೆಂಡ್ ಆಗುತ್ತಿದೆ. ಭಾರತದಲ್ಲೂ ಈ ವರ್ಜಿನ್ ಬರ್ತ್ ಎಂಬ ಪರಿಕಲ್ಪನೆ ಬಗ್ಗೆ ಕುತೂಹಲ ಶುರುವಾಗಿದೆ. ಪಾಶ್ಚಾತ್ಯ ದೇಶದಲ್ಲಿ ಕನ್ಯತ್ವ ಉಳಿಸಿಕೊಂಡು ಗರ್ಭ ಧರಿಸಲು ಹೆಣ್ಮಕ್ಕಳು 5 ಲಕ್ಷ ಕೈಲಿಟ್ಟುಕೊಂಡು ವೈದ್ಯರೆದುರು ಕ್ಯೂ ನಿಂತಿರುತ್ತಾರೆ. ಇದಕ್ಕೆಲ್ಲ ಇಂಬು ನೀಡಿರುವುದು ಐವಿಎಫ್ ಎಂಬ ತಂತ್ರಜ್ಞಾನ.

ನಾವು ಸಲಿಂಗಿಗಳೇನಲ್ಲ. ಆದರೆ ನಾವು ಗಂಡಿನೊಂದಿಗೆ ಲೈಂಗಿಕ ಸಂಬಂಧ ಹೊಂದದೆಯೇ ಗರ್ಭಧರಿಸಬೇಕು. ಪುರುಷನೊಂದಿಗಿನ ಸಂಬಂಧ ಪವಿತ್ರವಾಗಿಯೇ ಉಳಿದಿರಬೇಕು ಎಂಬ
ವಿಚಿತ್ರ ಹಂಬಲ ಹೆಂಗಳೆಯರಲ್ಲಿದೆ. ಇದು ಸಾಧ್ಯವೂ ಇದೆ ಎಂಬುದು ವಿಜ್ಞಾನ ಲೋಕದ ಅಚ್ಚರಿ. ವೈದ್ಯರ ಪ್ರಕಾರ ಈಗಾಗಲೇ 25 ಸ್ತ್ರೀಯರು ಕಳೆದ 5 ವರ್ಷಗಳಲ್ಲಿ ಕನ್ಯತ್ವ ಉಳಿಸಿಕೊಂಡೂ ತಾಯಂದಿರಾಗಿದ್ದಾರೆ. ಆದರೆ ಇದು ಪರಿಪೂರ್ಣ ತಾಯ್ತನ ಅಲ್ಲ ಮತ್ತು ಹಾಗೆ ಹುಟ್ಟುವ ಮಕ್ಕಳು ದೈಹಿಕವಾಗಿ ಪರಿಪೂರ್ಣ ಅನಿಸಿದರೂ ಅದು ವಾಸ್ತವ ಅಲ್ಲ  ಎನ್ನುತ್ತಾರೆ ವೈದ್ಯರು. ಈ ತಾಯ್ತನ ಕ್ಕೆ ಸಂಪ್ರದಾಯವಾದಿಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಇತ್ತ ಮಾನಸಿಕ ತಜ್ಞರು ಕೂಡ ಗಂಡು-ಹೆಣ್ಣು ಸೇರದೆಯೇ ಹುಟ್ಟುವ ಮಕ್ಕಳಲ್ಲಿ ಬೆಳವಣಿಗೆಯೇ ಇರಲ್ಲ ಎಂದು ಎಚ್ಚರಿಸಿದ್ದಾರೆ.

ಒನ್‍ಕೇರ್ ಫರ್ಟಿಲಿಟಿ ಎಂಬ ಇಂಗ್ಲೆಂಡ್‍ನ ಆಸ್ಪತ್ರೆಯದ್ದು ಐದು ಶಾಖೆಗಳಿದ್ದು, 10 ವರ್ಷಗಳಲ್ಲಿ ಈ ಮಾದರಿ ತಾಯ್ತನಕ್ಕೆ ಡಿಮ್ಯಾಂಡ್ ದ್ವಿಗುಣಗೊಂಡಿದೆ ಎನ್ನುತ್ತಾರೆ ಅಲ್ಲಿನ ವೈದ್ಯಕೀಯ ನಿರ್ದೇಶಕ ಮಹಾ ರಗುನಾಥ್. 20ರ ಆಸುಪಾಸಿನ ವಯಸ್ಸಿನವರೇ ಈ ಬಗ್ಗೆ ಹೆಚ್ಚು ಆಕರ್ಷಿತರಾಗಿರುವುದು ಗಮನಕ್ಕೆ ಬಂದಿದ್ದು, ಇದಕ್ಕೆ ಅವರು ಹೇಳುವ ಕಾರಣ ಕೂಡ ವಿಚಿತ್ರವಾಗಿದೆ. ಸೂಕ್ತ ಪುರುಷನ ಹುಡುಕಾಟದ ಕಷ್ಟ ಹಾಗೂ ಆ ನಂತರದ ಕಷ್ಟಗಳಿಗಿಂತ ಈ ರೀತಿಯ ತಾಯ್ತನವೇ ಲೇಸಂತೆ.

SCROLL FOR NEXT