ಲಾಹೋರ್: ರೊಟ್ಟಿಯನ್ನು ರೌಂಡ್ ಆಗಿ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಂದೆಯೊಬ್ಬ ತನ್ನ ಮಗಳನ್ನೆ ಕೊಂದಿರುವ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಲಾಹೋರ್ ನ ಅಜೀಮ್ ಪಾರ್ಕ್ ಎಂಬ ಪ್ರದೇಶದಲ್ಲಿ ಕಾಲಿದ್ ಎಂಬಾತ 13 ವರ್ಷದ ಮಗಳನ್ನು ತನ್ನ ಮಗನ ಜೊತೆ ಸೇರಿಕೊಂಡು ಚೆನ್ನಾಗಿ ಥಳಿಸಿದ್ದಾನೆ. ನಂತರ ಆಕೆ ಪ್ರಜ್ಞಾ ಹೀನಳಾಗಿ ಬಿದ್ದಿದ್ದಾಳೆ. ತನ್ನ ಹಿರಿಯ ಮಗಳು ಆಕೆಯನ್ನು ಆಸ್ಪತ್ರೆಗೆ ಸೇರಿಸುವಂತೆ ಒತ್ತಾಯಿಸಿದ್ದಾಳೆ.
ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಆಕೆ ಮೃತ ಪಟಿದ್ದಾಳೆ. ನಂತರ ಶವವನ್ನು ಶವಾಗಾರದ ಮುಂದೆ ಎಸೆದು ಬಂದಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪಾಕಿಸ್ತಾನ ಸ್ಥಳೀಯ ಚಾನೆಲ್ ವೊಂದು ವರದಿ ಮಾಡಿದೆ.