ವಿದೇಶ

ನಕಲಿ ವೀಸಾ: ಅಮೆರಿಕದಲ್ಲಿ 10 ಭಾರತೀಯರು ಸೇರಿ 21 ಮಂದಿ ಬಂಧನ

Mainashree

ವಾಷಿಂಗ್ಟನ್‌: ನಕಲಿ ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ 10 ಮಂದಿ ಭಾರತೀಯರು ಸೇರಿದಂತೆ 21 ಮಂದಿಯನ್ನು ಬಂಧಿಸಲಾಗಿದೆ.

ನಕಲಿ ವಿದ್ಯಾಭ್ಯಾಸ ವೀಸಾದ ಮೇಲೆ 26 ರಾಷ್ಟ್ರದ ಸಾವಿರ ಮಂದಿ ಅಮೆರಿಕದಲ್ಲಿ ನೆಲಿಸಿದ್ದು, ಆ ಪೈಕಿ 10 ಮಂದಿ ಭಾರತೀಯರು ಸೇರಿದಂತೆ ಕಾನೂನು ಮತ್ತು ಜಾರಿ ನಿರ್ದೇಶನಾಲಯ ದಳ 21 ಮಂದಿಯನ್ನು ಬಂಧಿಸಿದೆ.

ಜಾರಿ ನಿರ್ದೇಶನಾಲಯ ದಳದ ಪೊಲೀಸರು ವಾಷಿಂಗ್ಟನ್‌, ನ್ಯೂಯಾರ್ಕ್‌, ವರ್ಜಿನಿಯಾ ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 21 ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತರು ಅಮೆರಿಕದ ರಾಯಭಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತ ಭಾರತೀಯರ ಹೆಸರುಗಳು ಇನ್ನು ಬಹಿರಂಗಗೊಂಡಿಲ್ಲ.

SCROLL FOR NEXT