ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರವನ್ನು ನೇರ ಪ್ರಸಾರ ಮಾಡಿದ ಯುಎಸ್ ಮಹಿಳೆ ವಿರುದ್ಧ ಕೇಸ್ 
ವಿದೇಶ

ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರವನ್ನು ನೇರ ಪ್ರಸಾರ ಮಾಡಿದ ಯುಎಸ್ ಮಹಿಳೆ ವಿರುದ್ಧ ಕೇಸ್

ಅಮೆರಿಕದ 18 ವರ್ಷದ ವರ್ಷದ ಯುವತಿ ವಿರುದ್ಧ ತನ್ನ ಸ್ನೇಹಿತ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ನೇರ ಪ್ರಸಾರ ಮಾಡಿರುವ ಆರೋಪ...

ನ್ಯೂಯಾರ್ಕ್: ಅಮೆರಿಕದ 18 ವರ್ಷದ ವರ್ಷದ ಯುವತಿ ವಿರುದ್ಧ ತನ್ನ ಸ್ನೇಹಿತ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ನೇರ ಪ್ರಸಾರ ಮಾಡಿರುವ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಾಗಿದೆ.
ಮರೀನಾ ಅಲೆಕ್ಸೀವ್ನಾ ಲೋನಿನಾ  ಆಕೆಯ 17 ವರ್ಷದ ಸ್ನೇಹಿತೆ ಹಾಗೂ ಸ್ನೇಹಿತ ರೇಮಂಡ್ ಬಾಯ್ಡ್ ಗೇಟ್ಸ್ (29) ನೊಂದಿಗೆ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಗೇಟ್ಸ್ 17 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ನೇರ ಪ್ರಸಾರ ಮಾಡಲು ಅವಕಾಶವಿರುವ ಸ್ಟ್ರೀಮಿಂಗ್ ಅಪ್ಲಿಕೇಶನ್ ಮೂಲಕ ಅತ್ಯಾಚಾರವನ್ನು ಮರೀನಾ ನೇರ ಪ್ರಸಾರ ಮಾಡಿದ್ದಾಳೆ. ಅತ್ಯಾಚಾರ ನಡೆಯುವುದಕ್ಕೂ ಹಿಂದಿನ ದಿನ ಮರೀನಾ ಆಕೆಯ ಸ್ನೇಹಿತೆಯ ನಗ್ನ ಚಿತ್ರಗಳನ್ನೂ ತೆಗೆದಿದ್ದಳು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.
ಆಪ್ ಮೂಲಕ ಅತ್ಯಾಚಾರದ ದೃಶ್ಯವನ್ನು ಮರೀನಾ ಅಲೆಕ್ಸೀವ್ನಾ ಲೋನಿನಾಳ ಸ್ನೇಹಿತರೊಬ್ಬರು ವೀಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲೋನಿನಾ ಹಾಗೂ ರೇಮಂಡ್ ವಿರುದ್ಧ ಪೊಲೀಸರು ಅಪಹರಣ, ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಲೋನಿನಾ ಹಾಗೂ ರೇಮಂಡ್ ವಿರುದ್ಧದ ಆರೋಪ ಸಾಬೀಟಾದಲ್ಲಿ ಇಬ್ಬರಿಗೂ 40 ವರ್ಷಗಳ ಜೈಲು ಶಿಕ್ಷೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ': ಕಾಂಗ್ರೆಸ್ ಸಿಎಂಗಳ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದ ಆಂಧ್ರ ಸಿಎಂ Chandrababu Naidu!

ಪೋಕ್ಸೋ ಪ್ರಕರಣ: ವಚನಾನಂದ ಶ್ರೀಗೆ ಹೈಕೋರ್ಟ್​ ಬಿಗ್ ಶಾಕ್; ನಿರೀಕ್ಷಣಾ ಜಾಮೀನು ರದ್ದು

ಗೆಳೆಯನ ಅಂತ್ಯಕ್ರಿಯೆಗೆ ಕಣ್ಣೀರಿಡುತ್ತ ಓಡಿಬಂದ ಕೃಷಿ ತಾಪಂಡ; ವೈಶಾಕ್ ಕುಟುಂಬಸ್ಥರಿಂದ ನಟಿಗೆ ತೀವ್ರ ತರಾಟೆ!

ಬಾಂಗ್ಲಾದೇಶ: ದೀಪು ದಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ?, Video!

ಶಾಶ್ವತ ವಿದ್ಯುತ್ ಸಂಪರ್ಕ: ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ 1,094 ಕೋಟಿ ರೂ. ಆದಾಯ ಸಂಗ್ರಹದ ನಿರೀಕ್ಷೆ!