ದುಬೈ: ಹೆಂಡತಿಗೆ ಥಳಿಸಿದ ಪತಿಗೆ 20 ಛಡಿ ಏಟು
ಇಸ್ಲಾಮಿಕ್ ರಾಷ್ಟ್ರಗಳು ಕಠಿಣ ಕಾನೂನುಗಳಿಗೆ ಹೆಸರುವಾಸಿ. ಇದೀಗ ಸೌದಿ ಅರೇಬಿಯಾದಲ್ಲಿ ಪತ್ನಿಗೆ ಥಳಿಸಿದ ಪತಿಗೆ ಸಾರ್ವಜನಿಕವಾಗಿ 20 ಛಡಿ ಏಟಿನ ಶಿಕ್ಷೆ ನೀಡಲಾಗಿದೆ...
ಅಬು ದುಬೈ: ಇಸ್ಲಾಮಿಕ್ ರಾಷ್ಟ್ರಗಳು ಕಠಿಣ ಕಾನೂನುಗಳಿಗೆ ಹೆಸರುವಾಸಿ. ಇದೀಗ ಸೌದಿ ಅರೇಬಿಯಾದಲ್ಲಿ ಪತ್ನಿಗೆ ಥಳಿಸಿದ ಪತಿಗೆ ಸಾರ್ವಜನಿಕವಾಗಿ 20 ಛಡಿ ಏಟಿನ ಶಿಕ್ಷೆ ನೀಡಲಾಗಿದೆ.
ಕಳೆದ ತಿಂಗಳು ಪತ್ನಿ 30 ವರ್ಷದ ಗಂಡನ ವಿರುದ್ಧ ದೂರು ದಾಖಲಿಸಿದ್ದಳು. ಅಲ್ಲದೆ ಪತಿ ತನ್ನ ಮೇಲೆ ಹಲ್ಲೆ ಮಾಡಿರುವ ಕುರಿತ ವೈದ್ಯಕೀಯ ವರದಿಯನ್ನು ಸಲ್ಲಿಸಿದ್ದಳು. ಈ ವರದಿ ಅನ್ವಯ ಸೌದಿ ಅರೇಬಿಯಾ ಕೋರ್ಟ್ ಆರೋಪಿಗೆ 20 ಛಡಿ ಏಟಿನ ಶಿಕ್ಷೆ ನೀಡಿದೆ.
ವಿಚಾರಣೆ ವೇಳೆ ಪತಿರಾಯ ತಾನು ಹೆಂಡತಿಗೆ ಹೊಡೆದಿಲ್ಲ ತಾನು ಹೊಡೆಯುತ್ತೇನೆಂದು ತಮಾಷೆ ಮಾಡುತ್ತಿದ್ದೆ ಅಷ್ಟೇ ಎಂದು ಹೇಳಿದ್ದ. ರಾಜಿ ಮಾತುಕತೆ ಬಳಿಕ ಹೆಂಡತಿ ಪ್ರಕರಣವನ್ನು ಹಿಂಪಡೆಯುವುದಾಗಿ ಹೇಳಿದ್ದಳು. ಆದರೆ ಇದನ್ನು ನಿರಾಕರಿಸಿದ ಕೋರ್ಟ್ ಪತಿಗೆ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.