ಕಾಬೂಲ್: ಅಫ್ಘಾನ್ ಭದ್ರತಾ ಸಂಸ್ಥೆ, ಅಮೆರಿಕ ರಾಯಭಾರಿ ಕಚೇರಿ, ಅಧ್ಯಕ್ಷರ ನಿವಾಸ ಮತ್ತು ಇನ್ನಿತರ ಸರ್ಕಾರಿ ಸಂಸ್ಥೆಗಳಿರುವ ಸೆಂಟ್ರಲ್ ಕಾಬೂಲ್ ಬಳಿ ಮಂಗಳವಾರ ಬಾಂಬ್ ಸ್ಫೋಟ ಸಂಭವಿಸಿದೆ.
ಈ ಬಾಂಬ್ ಸ್ಫೋಟದಲ್ಲಿ ಸರಿ ಸುಮಾರು 24 ಮಂದಿ ಸಾವಿಗೀಡಾಗಿರುವ ಶಂಕೆ ಇದೆ ಎಂದು ಬಲ್ಲ ಮೂಲಗಳು ಹೇಳಿವೆ. ಅದೇ ವೇಳೆ 8 ಅಫ್ಘಾನ್ ಸೈನಿಕರು ಸೇರಿದಂತೆ ಹಲವಾರು ಮಂದಿಗೆ ಗಾಯಗಳಾಗಿವೆ ಎಂದು ಅಧ್ಯಕ್ಷ ಅಶ್ರಫ್ ಘಾನಿ ಹೇಳಿದ್ದಾರೆ.
ಆದಾಗ್ಯೂ, ಅಮೆರಿಕ ರಾಯಭಾರಿ ಕಚೇರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನದ ಭದ್ರತಾ ಸಂಸ್ಥೆಯನ್ನೇ ಗುರಿಯಾಗಿರಿಸಿ ಈ ಸ್ಫೋಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆ ಸ್ಫೋಟಕ್ಕೆ ಕಾರಣವೇನು? ಸ್ಫೋಟದ ಹಿಂದೆ ಯಾರ ಕೈವಾಡವಿದೆ ಎಂಬುದರ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಸಿಕ್ಕಿಲ್ಲ.