ಮೆಕ್ಸಿಕೊ ಸಿಟಿ : ಮೆಕ್ಸಿಕೊದ ರಾಷ್ಟ್ರೀಯ ತೈಲ ಕಂಪೆನಿ ಪೆಮೆಕ್ಸ್‌ನ ತೈಲೋತ್ಪನ್ನ ಘಟಕದಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕಂಪೆನಿಯ ಪ್ರಮುಖ ರಫ್ತು ಕೇಂದ್ರಗಳಲ್ಲಿ ಒಂದಾದ ವೆರಾಕ್ರುಜ್ ರಾಜ್ಯದ ಕೋಟ್‌ಜಕೋಲ್ಕಾಸ್ ಬಂದರು ಸಮೀಪದ ಘಟಕದಲ್ಲಿ ಬುಧವಾರ ಮಧ್ಯಾಹ್ನ ಈ ಅನಾಹುತ ನಡೆದಿದೆ. ಸ್ಫೋಟದ ಬೆನ್ನಲ್ಲೇ ಬೃಹತ್ ಪ್ರಮಾಣ ದಟ್ಟ ಹೊಗೆಯು ಮುಗಿಲನ್ನು ಆವರಿಸಿತ್ತು. ಸ್ಫೋಟ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವೆರಾಕ್ರುಜ್ ರಾಜ್ಯದ ತುರ್ತುಸೇವೆಗಳ ಮುಖ್ಯಸ್ಥ ಲೂಯಿಸ್ ಫಿಲಿಪ್ ಪುಂಟೆ ತಿಳಿಸಿದ್ದಾರೆ.
ದುರಂತದಲ್ಲಿ ತನ್ನ ಮೂವರು ಕಾರ್ಮಿಕರು ಮೃತಪಟ್ಟಿರುವುದನ್ನು ಖಚಿತ ಪಡಿಸಿರುವ ಪೆಮೆಕ್ಸ್, ಘಟನೆಯಲ್ಲಿ 138 ಜನರು ಗಾಯಗೊಂಡಿದ್ದರು. ಆ ಪೈಕಿ 88 ಜನರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದೆ.