ವಿದೇಶ

ಭಾರತ ಸಾಕ್ಷಿಗಳನ್ನು ಕಳಿಸದಿದ್ದರೆ 26 /11 ರ ವಿಚಾರಣೆ ಮತ್ತಷ್ಟು ವಿಳಂಬವಾಗುತ್ತೆ: ಪಾಕಿಸ್ತಾನ

Srinivas Rao BV

ಲಾಹೋರ್: 26 /11 ರ ಉಗ್ರ ದಾಳಿಯ ಬಗ್ಗೆ ಪಾಕಿಸ್ತಾನದ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕಳೆದ ಮೂರೂ ವಿಚಾರಣೆಗಳು ಮುಂದೂಡಲ್ಪಟ್ಟಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಭಾರತ ತನ್ನ ಬಳಿ ಇರುವ ಸಾಕ್ಷಿಗಳನ್ನು ಪಾಕಿಸ್ತಾನಕ್ಕೆ ಕಳಿಸದೇ ಇದ್ದರೆ ವಿಚಾರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಕಳೆದ ಮೂರು ವಾಗಳಲ್ಲಿ ಪ್ರಕರಣದ ವಿಚಾರಣೆ ಮುಂದೂಡಲ್ಪಟ್ಟಿದ್ದು ಇದಕ್ಕೆ ಭಾರತ ಸರ್ಕಾರ ಸಾಕ್ಷಿಗಳನ್ನು ಕಳುಹಿಸದೆ ಇರುವುದೇ ಪ್ರಮುಖ ಕಾರಣ ಎಂದು ಪಾಕ್ ಅಧಿಕಾರಿಗಳು ಆರೋಪಿಸಿದ್ದಾರೆ. ಮುಂಬೈ ಉಗ್ರ ದಾಳಿಯ ಪ್ರಕರಣವನ್ನು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ದಳ ಕೈಗೆತ್ತಿಗೊಂಡ ಬೆನ್ನಲ್ಲೇ ಭಾರತದ ಬಳಿ ಇರುವ 24ಸಾಕ್ಷಿಗಳನ್ನು ಹೇಳಿಕೆ ದಾಖಲಿಸಲು ಪಾಕಿಸ್ತಾನಕ್ಕೆ ಕಳಿಸಬೇಕೆಂದು ಭಾರತ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಭಾರತ ಸರ್ಕಾರ ಈ ವರೆಗೂ 24 ಸಾಕ್ಷಿಗಳನ್ನು ಕಳಿಸಿಕೊಟ್ಟಿಲ್ಲ ಎಂದು ಪಾಕಿಸ್ತಾನ ಹೇಳಿದೆ. 
ಭಾರತ ಸರ್ಕಾರ ಸಾಕ್ಷಿಗಳನ್ನು ಕಳಿಸಿಕೊಡಲು ವಿಳಂಬ ಮಾಡಿದಷ್ಟೂ, ವಿಚಾರಣೆ ವಿಳಂಬವಾಗುತ್ತದೆ, ಮುಂಬೈ ಉಗ್ರ ದಾಳಿಯ ಪ್ರಕರಣದ ಚೆಂಡು ಈಗ ಭಾರತದ ಅಂಗಳದಲ್ಲಿದೆ ಎಂದು ಪಾಕ್ ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT