ವಿದೇಶ

ಬಾಗ್ದಾದ್: ಪ್ರತ್ಯೇಕ ಕಾರ್ ಬಾಂಬ್ ದಾಳಿ: 14 ಸಾವು

Vishwanath S

ಬಾಗ್ದಾದ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಉಗ್ರ ಸಂಘಟನೆ ನಡೆಸಿದ ಎರಡು ಪ್ರತ್ಯಕ ಕಾರ್ ಬಾಂಬ್ ದಾಳಿಯಲ್ಲಿ 14 ಮಂದಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಘಟನೆ ಬಾಗ್ದಾದ್ ನಲ್ಲಿ ನಡೆದಿದೆ.

ಭದ್ರತಾ ಪಡೆಯನ್ನು ಗುರಿಯಾಗಿರಿಸಿಕೊಂಡು ಇಸಿಸ್ ಉಗ್ರರು ಬಾಗ್ದಾದ್ ನ ಉತ್ತರದಲ್ಲಿರುವ ಆಲ್-ಹಸ್ಸೆನಿಯಾ ಜಿಲ್ಲೆ ತಪಾಸಣೆ ಕೇಂದ್ರದ ಮೇಲೆ ನಡೆಸಿದ ಕಾರ್ ಬಾಂಬ್ ದಾಳಿಯಲ್ಲಿ 9 ಮಂದಿ ಮೃತಪಟ್ಟು 28 ಮಂದಿ ಗಾಯಗೊಂಡಿದ್ದರು.

ಇನ್ನು ಆರಬ್ ಆಲ್ ಜಾಜಲ್ ನಲ್ಲಿ ಸೇನೆಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ಎರಡನೇ ಕಾರ್ ಬಾಂಬ್ ದಾಳಿ ನಡೆಸಿದ್ದು, ಇದರಲ್ಲಿ ಮೂವರು ಮೃತಪಟ್ಟು 11 ಮಂದಿಗೆ ಗಾಯಗೊಂಡಿದ್ದು, ಇದೀಗ ಮತ್ತಿಬ್ಬರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

SCROLL FOR NEXT