ಶನಿವಾರ ನ್ಯೂಜಿಲೆಂಡ್ ಗೆ ಭೇಟಿ ನೀಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಆಕ್ಲೆಂಡ್ ನ ಗವರ್ನರ್ ಅವರ ಮುಖ್ಯ ಕಾರ್ಯದರ್ಶಿ ಗ್ರೆಗರಿ ಬಾನ್ ಮೂಗಿನಿಂದ ಮೂಗು ಸವರುವ ಮಾವೊರಿ ಸಂಪ್ 
ವಿದೇಶ

ಮೇಕ್ ಇನ್ ಇಂಡಿಯಾದಲ್ಲಿ ಪಾಲ್ಗೊಳ್ಳಲು ನ್ಯೂಜಿಲೆಂಡ್ ಹೂಡಿಕೆದಾರರಿಗೆ ರಾಷ್ಟ್ರಪತಿ ಆಹ್ವಾನ

ಭಾರತದ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನ್ಯೂಜಿಲೆಂಡ್ ಹೂಡಿಕೆದಾರರಿಗೆ ರಾಷ್ಟ್ರಪತಿ...

ಆಕ್ಲೆಂಡ್: ಭಾರತದ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನ್ಯೂಜಿಲೆಂಡ್ ಹೂಡಿಕೆದಾರರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಹ್ವಾನ ನೀಡಿದ್ದಾರೆ. 
ಮೂರು ದಿನಗಳ ಕೈಗೊಂಡಿದ್ದ ಪ್ರಣಬ್ ಮುಖರ್ಜಿ ನಿನ್ನೆ ನ್ಯೂಜಿಲೆಂಡ್ ಗೆ ಭೇಟಿ ನೀಡಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿ ಎಂದೆನಿಸಿಕೊಂಡಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಅಲ್ಲಿನ ಗವರ್ನರ್ ಜನರಲ್ ಸರ್ ಜೆರಿ ಮಟೆಪಾರೆ ಅವರ ನಿವಾಸದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. 
ತದ ನಂತರ ಸರ್ ಜೆರಿ ಮಟೆಪಾರೆ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ನ್ಯೂಜಿಲೆಂಡ್ ಹೂಡಿಕೆದಾರರಿಗೆ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಆಹ್ವಾನ ನೀಡಿದರು. 
ನ್ಯೂಜಿಲೆಂಡ್ ಹೈನುಗಾರಿಗೆ ಅಭಿವೃದ್ಧಿ, ಆಹಾರ ಸಂಸ್ಕರಣೆ, ಸಂಪರ್ಕ ಮತ್ತು ಮಾಹಿತಿ ತಂತ್ರತ್ರಾನ ಸೇರಿದೆ ಇತರೆ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ಶ್ಲಾಘಿಸಿ, ನ್ಯೂಜಿಲೆಂಡ್ ನೊಂದಿಗೆ ಭಾರತದ ಬಾಂಧವ್ಯ ವೃದ್ಧಿಯ ಕುರಿತು ಆಶಯ ವ್ಯಕ್ತಪಡಿಸಿದರು. 
ನ್ಯೂಜಿಲೆಂಡ್ ಸಹಭಾಗಿತ್ವದಲ್ಲಿ ಹೊಸ ಮತ್ತು ಅನ್ವೇಷಕ ಉತ್ಪನ್ನಗಳು ಮತ್ತು ತಂತ್ರತ್ರಾನ ರೂಪಿಸಲು ಭಾರತ ಆಸಕ್ತಿ ಹೊಂದಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ನ್ಯೂಜಿಲೆಂಡ್ ಹೂಡಿಕೆದಾರರು ಪಾಲ್ಗೊಳ್ಳಬೇಕು ಎಂದು ಪ್ರಣಬ್ ಮುಖರ್ಜಿ ಆಹ್ವಾನ ನೀಡಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಹಾಗೂ ಶಾಶ್ವತ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಗಳಿಗೆ ನ್ಯೂಜಿಲೆಂಡ್ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!