ವಿದೇಶ

ಸಿರಿಯಾ ವೈಮಾನಿಕ ದಾಳಿಯಲ್ಲಿ ಗಾಯಗೊಂಡು ಅವಶೇಷಗಳಡಿ ಸಿಲುಕಿದ್ದ ಬಾಲಕ ಅಲಿ ಸಾವು

Srinivasamurthy VN

ಡಮಾಸ್ಕಸ್: ಸಿರಿಯಾ ಮೇಲಿನ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ 10 ವರ್ಷದ ಬಾಲಕ ಅಲಿ ಡಖ್ನೀಶ್ ಚಿಕಿತ್ಸೆ  ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಕಳೆದ ಬುಧವಾರ ಸಿರಿಯಾದ ಅಲೆಪ್ಪೋ ನಗರದ ಮೇಲೆ ನಡೆದಿದ್ದ ವಾಯುದಾಳಿಯಲ್ಲಿ ಅಲಿ ಡಖ್ನೀಶ್ ಗಂಭೀರವಾಗಿ ಗಾಯಗೊಂಡಿದ್ದ, ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ ಬಾಲಕ ಅಲಿ  ಮತ್ತು ಆತನ ಸಹೋದರ ಒಮ್ರನ್ ಡಖ್ನೀಶ್ ರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸುದ್ದಿಗೆ  ಗ್ರಾಸವಾಗಿ ವೈರಲ್ ಆಗಿತ್ತು. ಬಾಲಕನ ಮತ್ತು ಅಲ್ಲಿನ ದಯನೀಯ ಪರಿಸ್ಥಿತಿಗೆ ಇಡೀ ವಿಶ್ವವೇ ಮರುಗಿ ವಾಯುದಾಳಿಯನ್ನು ಖಂಡಿಸಿದ್ದವು.

ಇದೀಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಒಮ್ರನ್ ಡಖ್ನೀರ್ ಸಹೋದರ ಅಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

SCROLL FOR NEXT