ವಿದೇಶ

ಮನಃ ಪರಿವರ್ತನಾ ಕೇಂದ್ರಕ್ಕೆ ಲಂಕಾ ಅಧ್ಯಕ್ಷರ ವೆಬ್ ಸೈಟ್ ಹ್ಯಾಕರ್!

Srinivasamurthy VN

ಕೊಲಂಬೋ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಅಧಿೃಕೃತ ವೆಬ್ ಸೈಟ್ ಅನ್ನೇ ಹ್ಯಾಕ್ ಮಾಡಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಆರೋಪಿ ಯುವಕನನ್ನು ಮನಃ ಪರಿವರ್ತನಾ  ಕೇಂದ್ರಕ್ಕೆ ರವಾನಿಸುವಂತೆ ಕೊಲಂಬೋ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.

ಪ್ರಕರಣದ ಮತ್ತೊರ್ವ ಆರೋಪಿಯನ್ನು ಪೊಲೀಸ್ ರಿಮ್ಯಾಂಡ್ ಹೋಮ್ ಗೆ ದಾಖಲಿಸಲಾಗಿದೆ. ಆರೋಪಿ ಯುವಕರ ಹೆಸರನ್ನು ಅವರ ಭವಿಷ್ಯದ ದೃಷ್ಟಿಯಿಂದ ಬಹಿರಂಗ ಪಡಿಸಲಾಗಿಲ್ಲ ಎಂದು  ಲಂಕಾ ಸರ್ಕಾರ ಹೇಳಿದೆ. ಲಂಕಾ ಸೇನಾ ಮೂಲಗಳು ನೀಡಿರುವ ಮಾಹತಿಯಂತೆ ಬಂಧಿತ ಯುವಕರು ಕಡುಗನಾವ ಮೂಲದವರೆಂದು ತಿಳಿದುಬಂದಿದ್ದು, ಈ ಹಿಂದೆ ಉನ್ನತ ಪರೀಕ್ಷೆಗಳ  ವೇಳಾಪಟ್ಟಿಯನ್ನು ಮುಂದೂಡುವಂತೆ ಆಗ್ರಹಿಸಿ ಲಂಕಾ ಅಧ್ಯಕ್ಷರ ವೆಬ್ ಸೈಟ್ ಅನ್ನು ಯುವಕು ಹ್ಯಾಕ್ ಮಾಡಿದ್ದರು.

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಲಂಕಾ ಸೈಬರ್ ಆರ್ಮಿ ಅಧಿಕಾರಿಗಳು ತನಿಖೆ ನಡೆಸಿ ಇಬ್ಬರು ಯುವಕರನ್ನು ಕಂಪ್ಯೂಟರ್ ಕ್ರೈಮ್ ಆ್ಯಕ್ಟ್-2007ರ ಕಾನೂನಿನ ಅಡಿಯಲ್ಲಿ  ಬಂಧಿಸಿದ್ದರು. ಲಂಕಾ ಇತಿಹಾಸದಲ್ಲಿಯೇ ಯುವಕನೋರ್ವ ಅಧ್ಯಕ್ಷರ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಹೀಗಾಗಿ ಲಂಕಾ ಪೊಲೀಸರು ಈ  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಯುವಕರ ವಿರುದ್ಧದ ಆರೋಪ ಸಾಬೀತಾದರೆ ಯುವಕರಿಗೆ 3 ಲಕ್ಷ (2 ಸಾವಿರ ಡಾಲರ್) ದಂಡ ಮತ್ತು 3 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.

SCROLL FOR NEXT