ಲಂಡನ್: ಫ್ರಾನ್ಸ್ ನ ಕೆಲವು ನಗರಗಳ ಬೀಚ್ ಗಳಲ್ಲಿ ಬುರ್ಕಿನಿಯನ್ನು ನಿಷೇಧಿಸಿ ಆದೇಶಿಸಿದ ನಂತರ ಇಂಗ್ಲೆಂಡಿನಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಬಹುತೇಕ ನಾಗರಿಕರು ಬುರ್ಖಾ ನಿಷೇಧದ ಪರವಾಗಿ ನಿಂತಿದ್ದಾರೆ ಎನ್ನಲಾಗಿದೆ.
ಯು-ಗವ್ ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡ 57 ಬ್ರಿಟನ್ ನಾಗರಿಕರು "ಇಂಗ್ಲೆಂಡಿನಲ್ಲಿ ಬುರ್ಖಾ ತೊಡುವುದನ್ನು ನಿಷೇಧಿಸುವುದಕ್ಕೆ ಕಾನೂನು ಮಾಡುವುದರ" ಪರವಾಗಿ ಒಮ್ಮತ ಮೂಡಿದ್ದರೆ 25% ಜನ ಇದರ ವಿರುದ್ಧವಾಗಿ ನಿಂತಿದ್ದಾರೆ.
1668 ವಯಸ್ಕರನ್ನು ಒಳಗೊಂಡ ಸಮೀಕ್ಷೆಯಲ್ಲಿ ಫ್ರಾನ್ಸ್ ನಲ್ಲಿ ಮಾಡಿದಂತೆ ಬುರ್ಕಿನಿಯನ್ನು ಕೂಡ ನಿಷೇಧಿಸುವಂತೆ 46% ಜನ ಹೇಳಿದ್ದಾರೆ 30% ಜನ ಇದನ್ನು ವಿರೋಧಿಸಿದ್ದಾರೆ. ಆದರೆ ಬುರ್ಕಿನಿ ನಿಷೇಧವನ್ನು ಫ್ರಾನ್ಸ್ ನ ಉನ್ನತ ನ್ಯಾಯಾಲಯ ವಜಾಗೊಳಿಸಿತ್ತು.
ಯುರೋಪಿನಲ್ಲಿ ಹಲವಾರು ದೇಶಗಳು ಇಸ್ಲಾಂ ಧರ್ಮದ ಹಲವು ನಂಬಿಕೆಗಳ ಮೇಲೆ ನಿಷೇಧ ಹೇರುತ್ತಿರುವುದು ಧಾರಾಳವಾಗಿದೆ. 2009 ರಲ್ಲಿ ಸ್ವಿಟ್ಸರ್ಲ್ಯಾಂಡ್ ನಲ್ಲಿ ಮಸೀದಿಗಳನ್ನು ಕಟ್ಟುವುದರ ವಿರುದ್ಧ ನಾಗರಿಕರು ಮತ ಚಲಾಯಿಸಿದ್ದರು ಮತ್ತು 2010 ರಿಂದ ಫ್ರಾನ್ಸ್ ನಲ್ಲಿ ಸಾರ್ವಜನಿಕ ಕಚೇರಿ ಮತ್ತು ಶಾಲೆಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics