ಸಾಂದರ್ಭಿಕ ಚಿತ್ರ 
ವಿದೇಶ

ಪ್ರಾಣಿಯ ಕೊಬ್ಬಿರುವ ೫ ಪೌಂಡ್ ನೋಟುಗಳನ್ನು ನಿಷೇಧಿಸಿದ ಬ್ರಿಟನ್ನಿನ ಹಿಂದೂ ದೇವಾಲಯಗಳು

೫ ಪೌಂಡ್ ನೋಟಿನಲ್ಲಿ ಪ್ರಾಣಿಯ ಕೊಬ್ಬಿದೆ ಎಂಬ ವಿಷಯ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಬ್ರಿಟನ್ನಿನ ಹಲವು ಹಿಂದೂ ದೇವಾಲಯಗಳನ್ನು ಅದನ್ನು ನಿಷೇಧಿಸಿವೆ.

ಲಂಡನ್: ೫ ಪೌಂಡ್ ನೋಟಿನಲ್ಲಿ ಪ್ರಾಣಿಯ ಕೊಬ್ಬಿದೆ ಎಂಬ ವಿಷಯ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಬ್ರಿಟನ್ನಿನ ಹಲವು ಹಿಂದೂ ದೇವಾಲಯಗಳನ್ನು ಅದನ್ನು ನಿಷೇಧಿಸಿವೆ. 
೫ ಪೌಂಡ್ ನೋಟುಗಳನ್ನು ಕನಿಷ್ಠ ಮೂರೂ ದೇವಾಲಯಗಳಲ್ಲಿ ಒಪ್ಪಿಕೊಳ್ಳುತ್ತಿಲ್ಲ ಎಂದು ಹಿಂದೂ ದೇವಾಲಯಗಳ ರಾಷ್ಟ್ರೀಯ ಸಮಿತಿಯ ವಕ್ತಾರ ಸತೀಶ್ ಶರ್ಮ ಬಿಬಿಸಿಗೆ ಹೇಳಿರುವುದಾಗಿ ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ. 
"ಧಾರ್ಮಿಕ ನಿಯಮಗಳ ಒಂದು ಸ್ಥಿತಿಯನ್ನು ಅನುಸರಿಸಿವುದು ದೇವಾಲಯಗಳ ಜವಾಬ್ದಾರಿ ಎಂದು ನಾನು ನಂಬುತ್ತೇನೆ. ೫ ಪೌಂಡ್ ನೋಟನ್ನು ನಿಷೇಧಿಸಿರುವ ಯಾವುದೇ ದೇವಾಲಯದ ನಡೆ ಅಸಮಸಂಜಸವೇನಲ್ಲ" ಎಂದು ಸತೀಶ್ ಹೇಳಿದ್ದಾರೆ. 
ಹೆರ್ಟ್ಫೋರ್ಡ್ಶಿರೆ ನಲ್ಲಿರುವ ಹರಿಕೃಷ್ಣ ದೇವಾಲಯ ಭಕ್ತಿವೇದಾಂತ ಮ್ಯಾನರ್ ಫೇಸ್ಬುಕ್ ನಲ್ಲಿ ಫೋಟೋವೊಂದನ್ನು ಪ್ರಕಟಿಸಿದ್ದು, "೫ ಪೌಂಡ್ ನೋಟುಗಳಲ್ಲಿ ಪ್ರಾಣಿಯ ಕೊಬ್ಬು ಇರುವುದರಿಂದ ಅದನ್ನ ಇನ್ನು ಮುಂದೆ ಒಪ್ಪಿಕೊಳ್ಳಲಾಗುವುದಿಲ್ಲ" ಎಂದಿದೆ. 
ಕಳೆದ ವಾರದ ವರದಿಗಳ ಪ್ರಕಾರ ಈ ನೋಟುಗಳಲ್ಲಿ ಮೇಣದಂತಹ ವಸ್ತು ಇದ್ದು, ಅದು ದನದ ಅಥವಾ ಮಟನ್ ಮಾಂಸದ ಕೊಬ್ಬಿನಿಂದ ತಯಾರಾಗುವಂತದ್ದು ಎಂಬ ವಿಷಯ ಬಹಿರಂಗವಾಗಿತ್ತು. ಹಿಂದುಗಳಿಗೆ ಹಸು ಪವಿತ್ರ ಎಂದು ಪರಿಗಣಿಸಲಾಗುತ್ತದೆ. 
ಈ ನೋಟನ್ನು ಬದಲಾಯಿಸಲು ಲೇಯ್ಸ್ಟರ್ ನ ಶ್ರೀ ಸನಾತನ ದೇವಾಲಯ ಕೂಡ ಅಭಿಯಾನ ಪ್ರಾರಂಭಿಸಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. "೫ ಪೌಂಡ್ ನೋಟಿನಲ್ಲಿ ಪ್ರಾಣಿಯ ಕೊಬ್ಬು ಇದೆ ಎಂದು ತಿಳಿದು ನಮಗೆ ಬಹಳ ನಿರಾಸೆಯಾಗಿದೆ" ಎಂದು ದೇವಾಲಯದ ಅಂತರ್ಜಾಲ ತಾಣ ತಿಳಿಸಿದೆ. 
ಬ್ಯಾಂಕ್ ನೋಟುಗಳಲ್ಲಿರುವ ಈ ಮೇಣದ ವಸ್ತುವನ್ನು ತೆಗೆದುಹಾಕುವಂತೆ ನಡೆಸಿರುವ ಅಭಿಯಾನಕ್ಕೆ ೧,೨೦,೦೦೦ ಕ್ಕೂ ಹೆಚ್ಚು ಜನ ಸಹಿ ಹಾಕಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ