ವಿದೇಶ

ಭಾರತವನ್ನು ಅನುಸರಿಸಲು ಮುಂದಾದ ಆಸ್ಟ್ರೇಲಿಯಾದಿಂದ ನೋಟು ನಿಷೇಧ ಕ್ರಮ?

Srinivas Rao BV
ಸಿಡ್ನಿ: ದೇಶದ ಒಳಗೇ ಇರುವ ಕಪ್ಪುಹಣಕ್ಕೆ ಕಡಿವಾಣ ಹಾಕಲು ಜಗತ್ತಿನ ಅನೇಕ ರಾಷ್ಟ್ರಗಳು ಪರಿಣಾಮಕಾರಿ ಮಾರ್ಗಗಳನ್ನು ಹುಡುಕುತ್ತಿದ್ದು, ಇತೀಚೆಗಷ್ಟೇ ಭಾರತ ಕೈಗೊಂಡ ನೋಟು ನಿಷೇಧ ಕ್ರಮವನ್ನು  ಆಸ್ಟ್ರೇಲಿಯಾ ಅನುಸರಿಸಲು ಚಿಂತನೆನಡೆಸಿದೆ. 
ಈಗಾಗಲೇ ಭಾರತದ ಮಾದರಿಯ ಕ್ರಮವನ್ನು ಜಾರಿಗೊಳಿಸಿರುವ ವೆನಿಜುವೆಲಾ, ಗರಿಷ್ಠ ಮುಖಬೆಲೆಯಾದ 100 ಬೊಲಿವರ್‌ ನೋಟು ಚಲಾವಣೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕೊಲೊಂಬಿಯಾದ ಮಾಫಿಯಾ ಅಪಾರ ಪ್ರಮಾಣದಲ್ಲಿ ಈ ಹಣವನ್ನು ಸಂಗ್ರಹಿಸಿಟ್ಟುಕೊಂಡಿದ್ದು ಮಾಫಿಯಾ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಇನ್ನು ಆಸ್ಟ್ರೇಲಿಯಾ ಸಹ ಭಾರತದಂತೆಯೇ ಗರಿಷ್ಠ ಮುಖಬೆಲೆಯ ನೋಟುಗಳ ($100 ನೋಟು) ಚಲಾವಣೆಯನ್ನು ರದ್ದುಗೊಳಿಸಿ ಹೊಸ ನೋಟುಗಳನ್ನು ಪರಿಚಯಿಸಲು ಮುಂದಾಗಿದೆ. ಅಲ್ಲಿನ ಸರ್ಕಾರದ ಮೂಲಗಳ ಮಾಹಿತಿ ಪ್ರಕಾರ, ಕಪ್ಪುಹಣಕ್ಕೆ ಕಡಿವಾಣ ಹಾಕಲು ನೋಟು ನಿಷೇಧದ ಕ್ರಮವನ್ನು ಅನುಸರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. 
ಭಾರತದಲ್ಲಿ ಒಟ್ಟಾರೆ ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ.8೦ ಕ್ಕಿಂತ ಹೆಚ್ಚು 500, 1000 ರೂ ನೋಟುಗಳೇ ಇದ್ದಂತೆ, ಆಸ್ಟ್ರೇಲಿಯಾದಲ್ಲಿಯೂ $50 $100 ನೋಟುಗಳು ಅತಿ ಹೆಚ್ಚು ಚಲಾವಣೆಯಲ್ಲಿದ್ದು, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೈಗೊಂಡ ಕ್ರಮವನ್ನು ಅನುಸರಿಸಿದರೆ ಕಪ್ಪುಹಣ ನಿಯಂತ್ರಿಸಬಹುದೆಂಬ ಲೆಕ್ಕಾಚಾರ ಆಸ್ಟ್ರೇಲಿಯಾ ಸರ್ಕಾರದ್ದು ಎಂದು ಹೇಳಲಾಗುತ್ತಿದೆ. 
SCROLL FOR NEXT