ವಿದೇಶ

ನೋಟು ನಿಷೇಧ ನಿರ್ಧಾರವನ್ನು ಜ.2 ವರೆಗೆ ಮುಂದೂಡಿದ ವೆನಿಜುವೆಲಾ!

Srinivas Rao BV
ಕಾರಾಕಸ್: ಕಪ್ಪು ಹಣಕ್ಕೆ ಕಡಿವಾಣ ಹಾಕಲು ಭಾರತದ ಮಾದರಿಯಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧಕ್ಕೆ ಮುಂದಾಗಿದ್ದ ವೆನಿಜುವೆಲಾ ಈಗ ತನ್ನ ನಿರ್ಧಾರವನ್ನು ದಿಢೀರ್ ಬದಲಾವಣೆ ಮಾಡಿದೆ. 
ಗರಿಷ್ಠ ಮುಖಬೆಲೆಯಾದ 100 ಬೊಲಿವರ್‌ ನೋಟು ಚಲಾವಣೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ವೆನಿಜುವೆಲಾ ಜ.2 ರ ವರೆಗೆ ನೋಟು ನಿಷೇಧದ ನಿರ್ಧಾರವನ್ನು ಮುಂದೂಡಿದೆ ಎಂದು ಬಿಬಿಸಿ ವರದಿ ಮಾಡಿದೆ. ಅಂತಾರಾಷ್ಟ್ರೀಯ ಅಭದ್ರತೆಗೆ ತಮ್ಮ ರಾಷ್ಟ್ರ ಬಲಿಪಶು ಆಗಿದ್ದು, ಹೊಸ 500 ಬೊಲಿವರ್‌ ನೋಟುಗಳು ಸರಿಯಾದ ಸಮಯಕ್ಕೆ ಬರುವುದನ್ನು ತಡೆಹಿಡಿಯಲಾಗಿದೆ ಎಂದು ನಿಕೋಲಸ್‌ ಮಡುರೊ ಹೇಳಿದ್ದಾರೆ. 
ಆರ್ಥಿಕ ಬಿಕ್ಕಟ್ಟು ಎದುರಾದ ಪರಿಣಾಮ ವೆನಿಜುವೆಲಾದಲ್ಲಿ ಅಂಗಡಿಗಳು ಬಂದ್ ಆಗಿದ್ದು, ಸಾರ್ವಜನಿಕರು ಬೇರೆ ದಾರಿ ಇಲ್ಲದೇ ವಹಿವಾಟು ನಡೆಸಲು ಕ್ರೆಡಿಟ್ ಕಾರ್ಡ್ ಅಥವ ಡೆಬಿಟ್ ಕಾರ್ಡ್ ಮೊರೆ ಹೋಗಬೇಕಾಯಿತು. ನೋಟು ನಿಷೇಧದಿಂದ ಉಂಟಾಗಿರುವ ನಗದು ಬಿಕ್ಕಟ್ಟಿನಿಂಡ ಹಲವು ಜನರು ಆಹಾರ ಸಿಗದೇ ಪರದಾಡುತ್ತಿದ್ದು, ನೋಟು ನಿಷೇಧಕ್ಕೆ ಆಕ್ರೋಶ ವ್ಯಕ್ತವಾದ ಪರಿಣಾಮ 6 ನಗರಗಳಲ್ಲಿ ಘರ್ಷಣೆ ನಡೆದಿದ್ದು ಹಲವರನ್ನು ವಶಕ್ಕೆ ಪಡೆಯಲಾಗಿದೆ.  ಕಳ್ಳಸಾಗಣೆಗಳಿಗೆ ತುರ್ತಾಗಿ ಕಡಿವಾಣ ಹಾಕುವುದಕ್ಕೆ ನೋಟು ನಿಷೇಧದ ಕ್ರಮ ಅತ್ಯಗತ್ಯವಾಗಿತ್ತು ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. 
SCROLL FOR NEXT