ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿಯ ಟ್ವೀಟ್ 
ವಿದೇಶ

ಸಿಪಿಇಸಿ ಕುರಿತು ಚೀನ ರಾಯಭಾರಿಯಿಂದ ಟ್ವೀಟ್ ಸಮರ!

ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ ಬಗ್ಗೆ ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಮಾಡಿದ್ದ ಟ್ವೀಟ್ ಟ್ವಿಟರ್ ನಲ್ಲಿ ಟ್ವೀಟ್ ಸಮರಕ್ಕೆ ಕಾರಣವಾಗಿದೆ.

ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ ಬಗ್ಗೆ ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಮಾಡಿದ್ದ  ಟ್ವೀಟ್ ಟ್ವಿಟರ್ ನಲ್ಲಿ ಟ್ವೀಟ್ ಸಮರಕ್ಕೆ ಕಾರಣವಾಗಿದೆ. 
ಸಿಪಿಇಸಿ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ, ಭ್ರಷ್ಟಾಚಾರ ನಡೆಯುತ್ತಿದೆ, ಯೋಜನೆಯ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯ ತೋರಲಾಗುತ್ತಿದ್ದು, ಪಂಜಾಬ್ ಪ್ರಾಂತ್ಯಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುತ್ತಿದೆ, ಯೋಜನೆಗಾಗಿ ಚ್ ಎಂಬ ಆರೋಪಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಈ ಬಗ್ಗೆ ಚೀನಾ ರಾಯಭಾರಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಪಿಇಸಿ ಯೋಜನೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಲು ಯತ್ನಿಸಿದಾಗ ಟ್ವೀಟ್ ಸಂಘರ್ಷ ಉಂಟಾಗಿದೆ.  
ಪಾಕಿಸ್ತಾನದಲ್ಲಿ ಸಂಪೂರ್ಣ ಬೆಂಬಲ ಹೊಂದಿರುವ ಸಿಪಿಇಸಿ ಯೋಜನೆಗೆ ಕೆಲವು ಜನರಿಂದ ಅಡ್ಡಿ ಉಂಟಾಗುತ್ತಿದೆ ಎಂದು ಚೀನಾ ರಾಯಭಾರಿ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಕೆಲವರಿಂದ ಯೋಜನೆ ಬಗ್ಗೆ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿ, ಸಿಪಿಇಸಿ ಯೋಜನೆಯ ಬಗ್ಗೆ ಭ್ರಷ್ಟಾಚಾರ ಆರೋಪ ಮಾಡುತ್ತಿರುವವರು, ಓರ್ವ ಸಂಭಾವಿತ ವ್ಯಕ್ತಿಯ ಅಂತರಾಳವನ್ನು ಆತನ ಕ್ರಮಗಳ ಆಧಾರದಲ್ಲಿ ಅಳತೆ ಮಾಡಬೇಕೆಂಬ ಚೀನಾದ ಜನಪ್ರಿಯ ನುಡಿಗಟ್ಟನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು. 
ಚೀನಾ ರಾಯಭಾರಿ ಟ್ವೀಟ್ ಗೆ ಪಾಕಿಸ್ತಾನದ ಡಾನ್ ಪತ್ರಿಕೆಯ ಪತ್ರಕರ್ತ ರಿಟ್ವೀಟ್ ಮಾಡಿ ಚೀನಾದ ಭ್ರಷ್ಟಾಚಾರದ ವಿರುದ್ಧದ ಹೋರಾಟ ನಡೆಸುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ್ದರು. ಪಾಕ್ ಪ್ರತ್ರಕರ್ತನ ಪ್ರಶ್ನೆಗೆ ಉತ್ತರಿಸಿದ್ದ ಚೀನಾ ರಾಯಭಾರಿ ಚೀನಾ ಈ ವರೆಗೂ 2013 ರಿಂದ ಈ ವರೆಗೂ 1.01 ಮಿಲಿಯನ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ. ಸಿಪಿಇಸಿ ಯೋಜನೆ ಪಾರದರ್ಶಕವಾಗಿದೆ, ಆದರೆ ಹಿರಿಯ ಪತ್ರಕರ್ತರೇ ಸಿಪಿಇಸಿ ಯೋಜನೆಯಲ್ಲಿ ಭ್ರಷ್ಟಾಚಾರ,  ಚೀನಾ ಖೈದಿಗಳ ಬಳಕೆಯ ಕತೆಗಳನ್ನು ನಂಬುತ್ತಿರುವುದು ದುರದೃಷ್ಟಕರ ಎಂದಿದ್ದರು. ಆದರೆ ಚೀನಾ ರಾಯಭಾರಿಯ ಸಮರ್ಥನೆಯನ್ನು ಒಪ್ಪದ ಪಾಕ್ ಪತ್ರಕರ್ತ ಟ್ವೀಟ್ ಸರಣಿಯನ್ನು ಮುಂದುವರೆಸಿದ್ದು ಚೀನಾ ರಾಯಭಾರಿ- ಪಾಕ್ ಪತ್ರಕರ್ತನ ನಡುವೆ ಕೆಲ ಕಾಲ ಟ್ವೀಟ್ ಸಮರ ನಡೆದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ, ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

Delhi Blast: ಮತ್ತೆ 4 ಪ್ರಮುಖ ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 6 ಕ್ಕೇರಿಕೆ

Jammu: ದೇಶ ವಿರೋಧಿ ಚಟುವಟಿಕೆ ಆರೋಪ, 'ಕಾಶ್ಮೀರ್ ಟೈಮ್ಸ್' ಕಚೇರಿ ಮೇಲೆ ದಾಳಿ, AK-47 ಕಾರ್ಟ್ರಿಡ್ಜ್‌ಗಳು ಪತ್ತೆ!

ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಘೋಷಣೆ, ಯಾವಾಗಿಂದ ಗೊತ್ತಾ?

ಯಾವ ಕ್ರಾಂತಿಯು ಇಲ್ಲ, ಕೇವಲ ''ಮಾಧ್ಯಮ ಸೃಷ್ಟಿ''; ನನ್ನ ಸ್ಥಾನ ಈಗಲೂ ಗಟ್ಟಿ, ಮುಂದೆಯೂ ಗಟ್ಟಿ; Video

SCROLL FOR NEXT