ಬಾಲಿಶವಾಗಿ ವರ್ತಿಸಬೇಡಿ, ಅಮೆರಿಕ ಸಹ ನಮ್ಮನ್ನು ಎದುರುಹಾಕೊಳ್ಳಲ್ಲ: ಭಾರತಕ್ಕೆ ಚೀನಾ ಎಚ್ಚರಿಕೆ
ದಲೈ ಲಾಮ ಅವರನ್ನು ಚೀನಾ ವಿರುದ್ಧದ ದಾಳವನ್ನಾಗಿ ಬಳಸಿಕೊಳ್ಳುವುದರ ವಿರುದ್ಧ ಭಾರತಕ್ಕೆ ಚೀನಾ ಮಾಧ್ಯಮವೊಂದು ಎಚ್ಚರಿಕೆ ನೀಡಿದ್ದು, ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ ಟ್ರಂಪ್ ಅವರನ್ನು ಚೀನಾ ನಿರ್ವಹಿಸಿದ ರೀತಿಯಿಂದ ಪಾಠ ಕಲಿಯುವಂತೆ ಭಾರತಕ್ಕೆ ಸಲಹೆ ನೀಡಿದೆ.
ನವದೆಹಲಿ: ದಲೈ ಲಾಮ ಅವರನ್ನು ಚೀನಾ ವಿರುದ್ಧದ ದಾಳವನ್ನಾಗಿ ಬಳಸಿಕೊಳ್ಳುವುದರ ವಿರುದ್ಧ ಭಾರತಕ್ಕೆ ಚೀನಾ ಮಾಧ್ಯಮವೊಂದು ಎಚ್ಚರಿಕೆ ನೀಡಿದ್ದು, ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ ಟ್ರಂಪ್ ಅವರನ್ನು ಚೀನಾ ನಿರ್ವಹಿಸಿದ ರೀತಿಯಿಂದ ಪಾಠ ಕಲಿಯುವಂತೆ ಭಾರತಕ್ಕೆ ಸಲಹೆ ನೀಡಿದೆ.
ಭಾರತ ಕೆಲವೊಮ್ಮೆ ಬಾಲಿಶವಾಗಿ ವರ್ತಿಸುತ್ತದೆ. ವಿಶ್ವದ ಶ್ರೇಷ್ಠ ರಾಷ್ಟ್ರವಾಗುವ ಅರ್ಹತೆ ಭಾರತಕ್ಕಿದ್ದರೂ ದೂರದೃಷ್ಟಿ ಕೊರತೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ಪ್ರಕಟಿಸಿರುವ ಲೇಖನದಲ್ಲಿ ಹೇಳಿದೆ.
ಇತ್ತೀಚೆಗಷ್ಟೇ ತೈವಾನ್ ರಾಷ್ಟ್ರಾಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ್ದ ಡೊನಾಲ್ಡ್ ಟ್ರಂಪ್ ಅವರ ನಡೆ ಹಾಗೂ ಅದಕ್ಕೆ ಪ್ರತಿಯಾಗಿ ಚೀನಾ ದಕ್ಷಿಣ ಚೀನಾ ಸಮುದ್ರದ ಬಳಿ ಅಮೆರಿಕದ ಡ್ರೋನ್ ಗಳನ್ನು ಹಿಡಿದಿದ್ದನ್ನು ಉಲ್ಲೇಖಿಸಿರುವ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಅಮೆರಿಕಗೆ ಕಲಿಸಿದ ಪಾಠವನ್ನು ನೋಡಿ ಭಾರತವೂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.