ಸೋಚಿ: ಸೋಚಿಯಲ್ಲಿರುವ ಬ್ಲಾಕ್ ಸೀ ಯುದ್ಧ ನೌಕೆಯಿಂದ ಟೇಕ್ ಆಫ್ ಆಗಿದ್ದ ಸೇನಾ ವಿಮಾನ ಟಿಯು 154 ರಡಾರ್ ನೊಂದಿಗೆ ಸಂಪರ್ಕ ಕಡಿದುಕೊಂಡಿದ್ದು ನಾಪತ್ತೆಯಾಗಿದೆ.
ಡಿ.25 ರಂದು ಬೆಳಿಗ್ಗೆ 82 ಪ್ರಯಾಣಿಕರು 10 ಸೇನಾ ಸಿಬ್ಬಂದಿಗಳಿದ್ದ ಸೇನಾ ವಿಮಾನ ಸಿರಿಯಾದತ್ತ ಪ್ರಯಾಣ ಬೆಳೆಸಿತ್ತು. ರಷ್ಯಾದ ಆರ್ ಟಿ ಪ್ರಸಾರ ವಾಹಿನಿ ರಷ್ಯಾ ಸೇನಾ ವಿಮಾನ ನಾಪತ್ತೆಯಾಗಿರುವುದರ ಬಗ್ಗೆ ವರದಿ ಪ್ರಕಟಿಸಿದ್ದು, 92 ಜನ ಪ್ರಯಾಣಿಕರಿದ್ದ ಸೇನಾ ವಿಮಾನ ಬ್ಲಾಕ್ ಸೀ ಯುದ್ಧ ನೌಕೆಯಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ರಡಾರ್ ನೊಂದಿಗೆ ಸಂಪರ್ಕ ಕಡಿದುಕೊಂಡಿದ್ದು ನಾಪತ್ತೆಯಾಗಿದೆ ಎಂದು ಹೇಳಿದೆ.
ಸೇನಾ ವಿಮಾನ ನಾಪತ್ತೆಯಾಗಿರುವುದರ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.