ಕೊಲಂಬೊ: ಶ್ರೀಲಂಕಾ ಮಾಜಿ ಪ್ರಧಾನಮಂತ್ರಿ ರತ್ನಸಿರಿ ವಿಕ್ರಮನಾಯಕೆ ಮಂಗಳವಾರ ವಿಧಿವಶರಾಗಿದ್ದಾರೆ. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.
ವಿಕ್ರಮನಾಯಕೆ ೨೦೦೦ ದಿಂದ ೨೦೦೧ ಹಾಗು ೨೦೦೫ ರಿಂದ ೨೦೧೦ ರ ಮಧ್ಯೆ ಶ್ರೀಲಂಕಾದ ಪ್ರಧಾನಿಯಾಗಿದ್ದರು.
೧೯೬೦ ಕ್ಕೆ ರಾಜಕೀಯಕ್ಕೆ ಧುಮುಕಿದ್ದ ಅವರು ೧೯೭೦ ರಲ್ಲಿ ನ್ಯಾಯ ಸಚಿವಾಲಯದ ಉಪ ಸಚಿವರಾಗಿ ನೇಮಕರಾಗಿದ್ದರು.
೧೯೯೪ ರಲ್ಲಿ ಶ್ರೀಲಂಕಾದ ಲೋಕಸಭೆಗೆ ಗೆದ್ದು, ಗೃಹ ವ್ಯವಹಾರಗಳ, ನಾಗರಿಕ ಆಡಳಿತ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.