ಸಿರಿಯಾದ ಡಮಾಸ್ಕಸ್ ಮೇಲೆ ವಾಯು ದಾಳಿ: 6 ಮಕ್ಕಳು ಸೇರಿ 15 ಸಾವು
ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ಬಂಡೂಕೋರರ ಮೇಲೆ ವಾಯುದಾಳಿ ಮತ್ತು ಫಿರಂಗಿ ದಾಳಿಯಲ್ಲಿ 6 ಮಕ್ಕಳು ಸೇರಿ 15 ಮಂದಿ ಸಾವನ್ನಪ್ಪಿದ್ದಾರೆ...
ಬೈರುತ್: ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ಬಂಡೂಕೋರರ ಮೇಲೆ ವಾಯುದಾಳಿ ಮತ್ತು ಫಿರಂಗಿ ದಾಳಿಯಲ್ಲಿ 6 ಮಕ್ಕಳು ಸೇರಿ 15 ಮಂದಿ ಸಾವನ್ನಪ್ಪಿದ್ದಾರೆ.
ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ಪೂರ್ವ ಗೌಟಾ ಭಾಗದಲ್ಲಿ ವಾಯುದಾಳಿ ಮತ್ತು ಫಿರಂಗಿ ದಾಳಿ ನಡೆದಿದ್ದು ಯಾವ ಭಾಗದಲ್ಲಿ ದಾಳಿಗಳಾಗಿವೆ ಎಂಬುದನ್ನು ಕೂಡಲೇ ನಿರ್ಧರಿಸಲು ಸಾಧ್ಯವಾಗಿಲ್ಲ. ಬಂಡೂಕೋರರು ಹೆಚ್ಚಾಗಿರುವ ಜಾಗಗಳ ಮೇಲೆ ಸಿರಿಯಾ ಸರ್ಕಾರ ಅಥವಾ ರಷ್ಯಾ ವಾಯು ದಾಳಿ ನಡೆಸಿದೆ ಎಂದು ಹೇಳಿದೆ.
ಬ್ರಿಟನ್ ಮೂಲದ ವೀಕ್ಷಣಾಲಯ ನಗರದ ಡೌಮಾ, ಹರಾಸ್ಟಾ, ಅರ್ಬಿನ್, ಜಮಾಲ್ಕ ಮತ್ತು ಸಕ್ಬಾಗಳಲ್ಲಿ ದಾಳಿ ನಡೆಸಿರುವುದಾಗಿ ಹೇಳಿದೆ. ಇನ್ನು ಸಿರಿಯಾ ರಾಜ್ಯದ ಟೆವಿಲಿಷನ್ ದಾಳಿಯಲ್ಲಿ ಏಳು ಮಂದಿಗೆ ಗಾಯಗಳಾಗಿರುವುದಾಗಿ ವರದಿ ಮಾಡಿದೆ.
2011ರ ನಂತರ ಸಿರಿಯಾ ಸರ್ಕಾರದ ವಿರುದ್ಧದ ಸಾರ್ವಜನಿಕರು ದಂಗೆ ಎದ್ದಿದ್ದು ಅಲ್ಲಿಂದ ಇಲ್ಲಿಯವರೆಗೂ ಸುಮಾರು 3 ಲಕ್ಷದ 10 ಸಾವಿರ ಮಂದಿ ಮೃತಪಟ್ಟಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.