ವಿದೇಶ

ಬುರ್ಖಾಗೆ ಮಾತ್ರ ನಿಷೇಧ, ಸಿಖ್ ಪೇಟಕ್ಕಿಲ್ಲ: ಫ್ರಾನ್ಸ್ ರಾಯಭಾರ ಕಚೇರಿ

Guruprasad Narayana
ನವದೆಹಲಿ: ಫ್ರಾನ್ಸ್ ನಲ್ಲಿ ತಮ್ಮ ಹಕ್ಕುಗಳಿಗೆ ಹೋರಾಡುತ್ತಿರುವ ಸಿಖ್ ಸಮುದಾಯದ ಕಳವಳಕ್ಕೆ ಉತ್ತರಿಸಿರುವ ಫ್ರಾನ್ಸ್ ರಾಯಭಾರಿ ಕಚೇರಿ, ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧ ಇರುವುದು ಬುರ್ಖಾ ತೊಡೂವುದಕ್ಕೆ ಮಾತ್ರ ಸಿಕ್ ಪೇಟಗಳಿಗೆ ಇಲ್ಲ ಎಂದು ಸ್ಪಷ್ಟೀಕರಿಸಿದೆ. 
"ಸಾರ್ವಜನಿಕ ಶಾಲೆಗಳಲ್ಲಿ ಹೊರತುಪಡಿಸಿ ಸಿಕ್ ಪೇಟವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ತೊಡಲು ಅವಕಾಶವಿದೆ. ಕೆಲವು ತೀವ್ರಗಾಮಿ ಸಂಘಟನೆಗಳು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಬುರ್ಖಾಗೆ ಮಾತ್ರ ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧವಿರುವುದು ಅದೂ ಕೂಡ ಭದ್ರತಾ ಕಾರಣಗಳಿಗೆ.
"ಅಲ್ಲದೆ ಪೇಟ ತೊಟ್ಟ ಸಿಖ್ ಸಮುದಾಯದವರಾಗಲೀ, ಸಿಖ್ ಪ್ರಾಥನಾ ಮಂದಿರಗಳಾಗಲೀ ಫ್ರಾನ್ಸ್ ನಲ್ಲಿ ಯಾರೂ ವಿರೋಧಿಸಿಲ್ಲ" ಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. 
"ಫ್ರಾನ್ಸ್ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮವನ್ನು ಹೊಂದದೆ ಇರುವುದನ್ನು ಕೂಡ ಗೌರವಿಸುತ್ತದೆ. ಯಾವುದೇ ರೀತಿಯ ತಾರತಮ್ಯವನ್ನು ವಿರೋಧಿಸುತ್ತದೆ. ಪೇಟ ತೊಡುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಸಾರ್ವಜನಿಕ ಶಾಲೆಗಳಲ್ಲಿ ಧರ್ಮದ ಕುರುಹುಗಳನ್ನು ತೊಡುವುದಕ್ಕೆ ನಿಷೇಧ ಹೇರಲಾಗಿದೆ ಅಷ್ಟೇ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 
ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲ್ಲೆಂಡ್ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಗಣರಾಜ್ಯೋತ್ಸವ ಕವಾಯತಿನಲ್ಲಿ ಸಿಖ್ ರೆಜಿಮೆಂಟ್ ಇಲ್ಲದಿದ್ದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರೆದಿದ್ದು, ಫ್ರಾನ್ಸ್ ನಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸಿಖ್ ಸಮುದಾಯಕ್ಕೆ ಇದು ಹಿನ್ನಡೆ ಎಂದು ಶಿರೋಮಣಿ ಅಕಾಲಿ ದಳ ಪಕ್ಷ ಆರೋಪಿಸಿದೆ. 
ಈ ವಿಷಯವಾಗಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. 
SCROLL FOR NEXT