ಟೋಕಿಯೋ: ವಿಶ್ವ ಸಂಸ್ಥೆ ನಿರ್ಬಂಧ ಹೇರಿದ ಹೊರತಾಗಿಯೂ ಉತ್ತರ ಕೊರಿಯಾ ಬ್ಯಾಲಿಸ್ಟಿಕ್ (ಗುರುತ್ವ ಬಲದಿಂದ ಗುರಿ ತಲುಪುವ) ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿರುವುದರ ವಿರುದ್ಧ ಸಂಸತ್ ನಲ್ಲಿ ನಿರ್ಣಯ ಕೈಗೊಳ್ಳಲು ಜಪಾನ್ ನಿರ್ಧರಿಸಿದೆ.
ಜಪಾನ್ ನ ಆಡಳಿತ, ವಿರೋಧ ಪಕ್ಷಗಳು ಈ ಬಗ್ಗೆ ಒಮ್ಮತದ ಅಭಿಪ್ರಾಯ ತಳೆದಿದ್ದು, ಫೆ.9 ರಂದು ಸಂಸತ್ ನಲ್ಲಿ ಉತ್ತರ ಕೊರಿಯಾ ವಿರುದ್ಧ ನಿರ್ಣಯ ಕೈಗೊಳ್ಳಲಿವೆ. ಜಪಾನ್ ನ ಆಡಳಿತ ಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಜಪಾನ್ ಹಾಗೂ ವಿರೋಧ ಪಕ್ಷ ಡೆಮಾಕ್ರೆಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ಉತ್ತರ ಕೊರಿಯಾ ರಾಕೆಟ್ ಮೂಲಕ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿರುವುದನ್ನು ಖಂಡಿಸಿವೆ.
ಕಳೆದ ತಿಂಗಳು ಹೈಡ್ರೋಜನ್ ಬಾಂಬ್ ಪರೀಕ್ಷಿಸಿದ್ದನ್ನೂ ಸಹ ಜಪಾನ್ ನ ಆಡಳಿತ, ವಿರೋಧ ಪಕ್ಷಗಳು ಖಂಡಿಸಿದ್ದವು. ಕ್ಷಿಪಣಿ ಪರೀಕ್ಷೆ ನಡೆಸಿರುವ ಹಿನ್ನೆಲೆಯಲ್ಲಿ ಪಯೋಂಗ್ಯಾಂಗ್ ಮೇಲಿನ ನಿರ್ಬಂಧಗಳನ್ನು ಬಿಗಿಗೊಳಿಸಲು ಜಪಾನ್ ಪ್ರಧಾನಿ ಶಿಂಜೋ ಅಬೆ ಚಿಂತನೆ ನಡೆಸಿದ್ದಾರೆ.
ಉತ್ತರ ಕೋರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆಯಾದರೂ, ರಾಕೆಟ್ ಉಡಾವಣೆ ಮಾಡಿದ್ದು ಉಪಗ್ರಹವೊಂದನ್ನು ಕಕ್ಷೆಗೆ ಸೇರಿಸಲು ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ.