ಇಂಡೋ-ನೇಪಾಳ ಗಡಿಯಲ್ಲಿ ಇಸ್ರೇಲ್ ನಾಗರಿಕನ ಬಂಧನ
ಉತ್ತರ ಪ್ರದೇಶದ ಭಾರತ-ನೇಪಾಳದ ಗಡಿಯಲ್ಲಿ ಇಸ್ರೇಲ್ ನಾಗರಿಕನೊಬ್ಬನನ್ನು...
ಮಹಾರಾಜಗಂಜ್: ಉತ್ತರ ಪ್ರದೇಶದ ಭಾರತ-ನೇಪಾಳದ ಗಡಿಯಲ್ಲಿ ಇಸ್ರೇಲ್ ನಾಗರಿಕನೊಬ್ಬನನ್ನು ಬಂಧಿಸಲಾಗಿದೆ.
ಪಾಸ್ ಪೋರ್ಟ್ ಇಲ್ಲದೇ ಅಕ್ರಮವಾಗಿ ಭಾರತದೊಳಗೆ ನುಸುಳುತ್ತಿದ್ದ ಇಸ್ರೇಲ್ ನಾಗರಿಕ ರ್ಯಾನ್ ರೋಸೆನೆಜ್ವೀ ನನ್ನು ಬಂಧಿಸಲಾಗಿದೆ.
ನಿನ್ನೆ ಸಂಜೆ ಸೊನೌಲಿ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಈತ, ಕಠ್ಮಂಡುವಿನಿಂದ ಭಾರತಕ್ಕೆ ಬರುತ್ತಿದ್ದನು.
ಸೊನೌಲಿ ಪ್ರದೇಶದಲ್ಲಿ ಸಶಸ್ತ್ರ ಸೀಮಾ ಬಲ(ಎಸ್ ಎಸ್ ಬಿ) ಇಸ್ರೇಲ್ ನಾಗರಿಕನನ್ನು ಬಂಧಿಸಿದೆ ಎಂದು ಕಮ್ಯಾಂಡೆಂಟ್ ಕೆಎಸ್ ಬಂಕೋಟಿ ತಿಳಿಸಿದ್ದಾರೆ.
ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ಗುಪ್ತಚರ ಇಲಾಖೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.