ಸೂಪರ್ಸೋನಿಕ್ ಜೆಟ್ ನಿರ್ಮಾಣಕ್ಕೆ ನಾಸಾ ಸಿದ್ಧತೆ
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂಪರ್ಸೋನಿಕ್ ಪ್ಯಾಸೆಂಜರ್ ಜೆಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರಾಥಮಿಕ ವಿನ್ಯಾಸಗಳನ್ನು...
ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂಪರ್ಸೋನಿಕ್ ಪ್ಯಾಸೆಂಜರ್ ಜೆಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರಾಥಮಿಕ ವಿನ್ಯಾಸಗಳನ್ನು ಈಗಾಗಲೇ ರಚಿಸಿಯಾಗಿದೆ ಎಂದು ನಾಸಾ ಹೇಳಿದೆ.
ಸೂಪರ್ಸೋನಿಕ್ ಪ್ಯಾಸೆಂಜರ್ ಜೆಟ್ನ ಪ್ರಾಥಮಿಕ ವಿನ್ಯಾಸವನ್ನು ರಚಿಸಲು ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಕಂಪನಿಯೊಂದಿಗೆ 2 ಕೋಟಿ ಡಾಲರ್ನ ಒಪ್ಪಂದ ಮಾಡಲಾಗಿದೆ ಎಂದು ನಾಸಾ ವ್ಯವಸ್ಥಾಪಕ ಚಾರ್ಲ್ಸ್ ಬೋಲ್ಡನ್ ಹೇಳಿದ್ದಾರೆ.
ಸಾಮಾನ್ಯವಾಗಿ ಜೆಟ್ ಇಂಜಿನ್ಗಳು ಅಧಿಕ ಸದ್ದು ಹೊರಡಿಸುತ್ತವೆ. ಆದರೆ ಇಲ್ಲಿ ಕಡಿಮೆ ಸದ್ದು ಮಾಡುವ ಇಂಜಿನ್ಗಳನ್ನು ರಚಿಸಲಾಗುತ್ತಿದೆ. ಮಾಲಿನ್ಯ ಕಡಿಮೆ ಮಾಡಿ, ಮೈಲೇಜ್ ಹೆಚ್ಚು ಮಾಡುವ ರೀತಿಯಲ್ಲಿ ಈ ಜೆಟ್ ನಿರ್ಮಾಣ ಮಾಡಲಾಗುತ್ತದೆ.
ಈ ವಿಮಾನವನ್ನು ಪರಿಸರ ಸ್ನೇಹಿಯನ್ನಾಗಿ ಮಾಡಲು ನಾಸಾ ತೀರ್ಮಾನಿಸಿದೆ ಎಂದು ನಾಸಾ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.