ಇಸ್ಲಾಮಾಬಾದ್: ಪ್ರಧಾನಿ ಮೋದಿ ಅವರ ಭೇಟಿಯು ಭಾರತ-ಪಾಕ್ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಶಾಭಾವ ಮೂಡಿಸಿದ್ದರೂ, ಪಠಾಣ್‍ಕೋಟ್ ದಾಳಿಯು ಉಭಯ ದೇಶಗಳ ಸಂಬಂಧಕ್ಕೆ ಸವಾಲು ಹಾಕಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.
ಭಾನುವಾರ ಎಕ್ಸ್‍ಪ್ರೆಸ್ ಟ್ರಿಬ್ಯೂನ್, ದ ನ್ಯೂಸ್ ಇಂಟರ್ ನ್ಯಾಷನಲ್, ಡಾನ್ ಸೇರಿದಂತೆ ಪಾಕ್‍ನ ಪ್ರಮುಖ ಪತ್ರಿಕೆಗಳು ಪಠಾಣ್‍ಕೋಟ್ ಉಗ್ರ ದಾಳಿಯ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಿದವು. ಜತೆಗೆ, ಈ ದಾಳಿಯು ಇನ್ನೇನು ಸರಿಹೋಗುತ್ತಿದ್ದ ಉಭಯ ದೇಶಗಳ ಸಂಬಂಧಕ್ಕೆ ಹುಳಿ ಹಿಂಡಿದೆ ಎಂದು ಎಕ್ಸ್‍ಪ್ರೆಸ್ ಟ್ರಿಬ್ಯೂನ್ ಹೇಳಿದೆ.
ಇನ್ನು ದಾಳಿ ಬೆನ್ನಲ್ಲೇ ಭಾರತದ ಪ್ರತಿಕ್ರಿಯೆ ನೋಡಿದರೆ, ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಅಂದುಕೊಂ ಡಂತೆ ನಡೆಯಲಿದೆ ಎಂಬುದನ್ನು ಸೂಚಿಸಿದೆ ಎಂದು ಡಾನ್ ವರದಿ ಮಾಡಿದೆ. ಉರ್ದು ಪತ್ರಿಕೆಗಳು ಮಾತ್ರ, ತನಿಖೆಗೆ ಮೊದಲೇ ಪಾಕ್ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದಿವೆ.