ಭಾರತೀಯ ರಾಯಭಾರ ಕಚೇರಿ ರಕ್ಷಣೆಗಾಗಿ ಗನ್ ಹಿಡಿದ ಅಫ್ಘಾನ್ ಗವರ್ನರ್
ಉಗ್ರರ ದಾಳಿಗೆ ತುತ್ತಾಗಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ರಕ್ಷಣೆಗಾಗಿ ಸ್ವತಃ ಬಲ್ಖ್ ಪ್ರಾಂತ್ಯದ ಗವರ್ನರ್...
ಕಾಬೂಲ್: ಉಗ್ರರ ದಾಳಿಗೆ ತುತ್ತಾಗಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ರಕ್ಷಣೆಗಾಗಿ ಸ್ವತಃ ಬಲ್ಖ್ ಪ್ರಾಂತ್ಯದ ಗವರ್ನರ್ ಆಟಾ ಮೊಹಮ್ಮದ್ ನೂರ್ ಅವರೇ ಗನ್ ಹಿಡಿದಿದ್ದರು!
ಮಜಾರ್-ಎ-ಷರೀಫ್ ನಗರದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ನಾಶಗೊಳಿಸಲು ಶಸ್ತ್ರ ಸಜ್ಜಿತ ಉಗ್ರರು ಸುತ್ತುವರಿದಾಗ ಗವರ್ನರ್ ನೂರ್ ಸಹ ಗನ್ ಎತ್ತಿಕೊಂಡು ಉಗ್ರರ ವಿರುದ್ಧದ ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿದ್ದಾರೆ. ಗವರ್ನರ್ ಗನ್ ಹಿಡಿದ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ನೂರ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಅಮರ್ ಸಿನ್ಹಾ ಅವರು, ಮಜಾರ್‌ನಲ್ಲಿ ವಿಶೇಷ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಅಂತ್ಯಗೊಳಿಸುತ್ತಿದ್ದು, ದೊಡ್ಡ ಸಮರವೇ ನಡೆಯುತ್ತಿದೆ. ಖುದ್ದು ರಾಜ್ಯಪಾಲ ನೂರ್ ಅವರೇ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸೋವಿಯತ್ ದಾಳಿ ವಿರುದ್ಧ ಬಂಡೆದ್ದ ಅಹಮ್ಮದ್ ಶಾ ಮಸೂದ್ ಉತ್ತರ ಮೈತ್ರಿಯ ಕಮಾಂಡರ್ ಆಗಿದ್ದ ನೂರ್ ಅವರು, ಯುದ್ಧ ತರಬೇತಿ ಪಡೆದಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.