ವಿದೇಶ

ಜೈಶ್ ಎಂಬ ಉಗ್ರ ಸಮೂಹ

Mainashree
ಅಝರ್- ಜೈಶ್ ಬೆನ್ನೆಲುಬು 
ಜೈಶ್-ಇ-ಮೊಹಮ್ಮದ್ ಅನ್ನು ಅಝರ್ ಎಂಬಾತ 2000ದ ಜ.31ರಂದು ಕರಾಚಿಯಲ್ಲಿ ಸ್ಥಾಪಿಸಿದ. ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣದ ವೇಳೆ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಭಾರತ ಸರ್ಕಾರವು ಬಿಡುಗಡೆ ಮಾಡಿದ 3 ಉಗ್ರರ ಪೈಕಿ ಒಬ್ಬ ಈ ಅಝರ್. ಬಂಧನಕ್ಕೂ ಮೊದಲು ಈತ ಹರ್ಕತುಲ್ ಅನ್ಸಾರ್‍ನ ಪ್ರಧಾನ ಕಾರ್ಯದರ್ಶಿಯಾಗಿದ್ದ. ಬಳಿಕ ಐಎಸ್‍ಐ ನೆರವಿನಿಂದ ಜೈಶ್ ಸ್ಥಾಪಿಸಿದ.
ಜೈಶ್‍ನ ಪ್ರಮುಖ ದಾಳಿಗಳು
2001ಜನವರಿ: ಶ್ರೀನಗರ ರಾಜ್ಯ ಅಸೆಂಬ್ಲಿ ಕಟ್ಟಡದಲ್ಲಿ ಆತ್ಮಾಹುತಿ ದಾಳಿ. 31 ಮಂದಿ ಸಾವು, 60 ಮಂದಿಗೆ ಗಾಯ
2001 ಡಿಸೆಂಬರ್: ಸಂಸತ್ ಮೇಲೆ ಉಗ್ರರ ದಾಳಿ. 12ರಷ್ಟು ಭದ್ರತಾ ಸಿಬ್ಬಂದಿ, ಇತರೆ ಸಿಬ್ಬಂದಿ ಸಾವು. ಲಷ್ಕರ್ ಜತೆ ಸೇರಿ ಈ ಕೃತ್ಯ
2005 ಫೆಬ್ರವರಿ: ಹೊಸ ಸಿಎಂ ಪ್ರಮಾಣ ಸ್ವೀಕಾರಕ್ಕೆ ಸ್ವಲ್ಪ ಮುಂಚೆ ಶ್ರೀನಗರದ ಹೊರವಲಯದಲ್ಲಿ ಕಾರಿನಲ್ಲಿ ಬಾಂಬಿಟ್ಟ ಉಗ್ರರು. 5 ಮಂದಿ ಸಾವು, 18 ಮಂದಿಗೆ ಗಾಯ
ಎಲ್ಲಿ ನಿರ್ವಹಣೆ?
ಜಮ್ಮು ಮತ್ತು ಕಾಶ್ಮೀರದೊಳಗೆ ಕಾರ್ಯನಿರ್ವಹಣೆ. 2002ರಲ್ಲಿ ಪಾಕ್ ನ ಪರ್ವೇಜ್ ಮುಷರ್ರಫ್ ಸರ್ಕಾರ ಈ ಗುಂಪನ್ನು ಅಧಿಕೃತವಾಗಿ ನಿಷೇಧಿಸಿತ್ತು. ಆಸ್ಟ್ರೇಲಿಯಾ, ಕೆನಡಾ, ಯುಎಇ, ಬ್ರಿಟನ್, ಅಮೆರಿಕ ಮತ್ತು ವಿಶ್ವಸಂಸ್ಥೆಯು ಜೈಶ್ ಅನ್ನು ಉಗ್ರ ಸಂಘಟನೆ ಎಂದು ಘೋಷಿಸಿವೆ.
ಪ್ರಸ್ತುತ ನೆಲೆ
2008ರಲ್ಲಿ ಅಂದರೆ 26//11ರ ಬಳಿಕ ಮಸೂದ್ ಪಾಕ್ ಆಕ್ರಮಿತಿ ಕಾಶ್ಮೀರದಿಂದ ಬಹಾವಲ್ಪುರಕ್ಕೆ ತೆರಳಿದೆ. ಜೈಶ್ ನ ಪ್ರಧಾನ ಕಚೇರಿಯಿರುವುದು ಇದೇ ಬಹಾವಲ್ಪುರದಲ್ಲಿ. ಐಎಸ್ ಐ ಪೋಷಿತ ಜೈಶ್ ಯುವಕರನ್ನು ಜಿಹಾದ್ ನತ್ತ ಪ್ರೇರೇಪಿಸುವ ಕೆಲಸ ಮಾಡುತ್ತದೆ. 
ಬಲಾಬಲ
ಜೆಇಎಂನಲ್ಲಿ ಸುಮಾರು 400 ಮಂದಿ ಉಗ್ರರಿದ್ದು, ಇದರ ಪಡೆಯು ಹೆಚ್ಚಾಗಿ ಸುಪ್ತವಾಗಿರುತ್ತದೆ.
ಪರಿಣತಿ ಯಾವುದರಲ್ಲಿ?
ಲಷ್ಕರ್ ಸಂಘಟನೆಯು ಸೈದ್ಧಾಂತಿಕ ಗುರಿಯತ್ತ ಗಮನ ನೆಟ್ಟರೆ, ಜೈಶ್ ಗೆ ಯಾವಾಗಲೂ ಸೇನೆ ಹಾಗೂ ದೇಶದ ಪ್ರಮುಖ ನೆಲೆಗಳೇ ಟಾರ್ಗೆಟ್. 
SCROLL FOR NEXT