ಕಣ್ಣೀರಿಗಾಗಿ ಬರಾಕ್ ಒಬಾಮಾ ಕಚ್ಚಾ ಈರುಳ್ಳಿ ಉಪಯೋಗಿಸಿದ್ದರು
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬಂದೂಕು ನಿಯಂತ್ರಣ ಕಾರ್ಯಕ್ರಮದಲ್ಲಿ ಅತ್ತು ಕಣ್ಣೀರು ಬರಿಸಿಕೊಳ್ಳಲು ಈರುಳ್ಳಿ ಉಪಯೋಗಿಸಿದ್ದರು ಎಂದು ...
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬಂದೂಕು ನಿಯಂತ್ರಣ ಕಾರ್ಯಕ್ರಮದಲ್ಲಿ ಅತ್ತು ಕಣ್ಣೀರು ಬರಿಸಿಕೊಳ್ಳಲು ಈರುಳ್ಳಿ ಉಪಯೋಗಿಸಿದ್ದರು ಎಂದು ಅಮೆರಿಕಾದ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಜನವರಿ 5ರಂದು ಅಮೆರಿಕಾದ ವೈಟ್ ಹೌಸ್ ನಲ್ಲಿ ನಡೆದ ಬಂದೂಕು ನಿಯಂತ್ರಣ ಕ್ರಮಗಳು ಎಂಬ ಕಾರ್ಯಕ್ರಮದಲ್ಲಿ ಮಾತನಾಡುವಾಗ ಭಾವೋದ್ವೇಗಕ್ಕೊಳಗಾದ ಬರಾಕ್ ಒಬಾಮಾ ಕೃತಕವಾಗಿ ಅತ್ತರು. ಎಂದು ವರದಿ ಮಾಡಲಾಗಿದೆ.
2012 ರಲ್ಲಿ ಸ್ಯಾಂಡಿ ಹುಕ್ ಶಾಲೆಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ 20 ಮಕ್ಕಳು ಸಾವನಪ್ಪಿದ ಘಟನೆ ಸ್ಮರಿಸುತ್ತಾ ಬರಾಕ್ ಒಮಾಬಾ ಕಣ್ಣಿರು ಹಾಕಿದ್ದರು. ಈ ಸಂಬಂಧ ಚಾನೆಲ್ ನಿರೂಪಕಿ ಚರ್ಚಿಸುವಾಗ, ನಾಯಕರು ತೋರಿಸುವ ಕಣ್ಣೀರು ಹಾಗೂ ಭಾವೋದ್ವೇಗವನ್ನು ನಂಬಬಾರದು ಎಂದು ಹೇಳಿದ್ದಾರೆ.
ಕಣ್ಣೀರು ಬರಿಸಿಕೊಳ್ಳಲು ಒಬಾಮಾ ಈರುಳ್ಳಿ ಅಥವಾ ಬೇರೆ ಯಾವ ವಸ್ತುವನ್ನು ಬಳಸಿದ್ದರೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ನಿರೂಪಕಿ ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.