ಜಕಾರ್ತಾ: ಇಂಡೋನೇಷ್ಯಾ ರಾಜಧಾನಿ ಜಕಾರ್ತ ನಗರದ ಹೃದಯ ಭಾಗದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಕನಿಷ್ಠ ಮೂವರು ಸಾವಿಗೀಡಾಗಿದ್ದಾರೆ.
ಇಲ್ಲಿನ ವಿಶ್ವಸಂಸ್ಥೆಯ ಕಚೇರಿ ಮತ್ತು ಮಾಲ್ ವೊಂದರ ಹತ್ತಿರ ಆರು ಬಾಂಬ್ ಗಳು ಸರಣಿಯಾಗಿ ಸ್ಪೋಟಗೊಂಡಿವೆ. ಸ್ಥಳದಲ್ಲಿ ಭದ್ರತಾ ಪಡೆಗಳು ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಸ್ಪೋಟ ನಡೆದಲ್ಲಿ ಪೊಲೀಸ್ ಚೌಕಿಯೊಂದು ಹಾನಿಗೀಡಾಗಿದೆ.
ಮಾಧ್ಯಮ ವರದಿ ಪ್ರಕಾರ, ಪಶ್ಚಿಮ ಜಕಾರ್ತದ ಪಲ್ಮೇರಾ ಉಪನಗರದಲ್ಲಿ ಪ್ರತ್ಯೇಕ ಸ್ಪೋಟವೊಂದು ಕೇಳಿಬಂದಿದೆ.
ವಿಶ್ವಸಂಸ್ಥೆ ಕಚೇರಿ ಅಧಿಕಾರಿ ಜೆರಿಮಿ ಡೌಗ್ಲಾಸ್ ದಾಳಿ ಕುರಿತು ಟ್ವೀಟ್ ಮಾಡಿದ್ದು, ವಿಶ್ವಸಂಸ್ಥೆ ಕಚೇರಿ ಮತ್ತು ನಮ್ಮ ಹೊಟೇಲ್ ನಿಂದ 100 ಮೀಟರ್ ದೂರದಲ್ಲಿ ಆತ್ಮಹತ್ಯಾ ದಾಳಿ ನಡೆದಿತ್ತು. ಜಕಾರ್ತಾ ನಗರದ ಕೆಳ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.