ಅಲನ್ ರಿಕ್‍ಮನ್ 
ವಿದೇಶ

ಹ್ಯಾರಿಪಾಟರ್ ಖ್ಯಾತಿಯ ನಟ ಅಲನ್ ರಿಕ್‍ಮನ್ ನಿಧನ

ಹ್ಯಾರಿಪಾಟರ್, ಡೈಹಾರ್ಡ್, ಸೆನ್ಸ್ ಅಂಡ್ ಸೆನ್ಸಿಬಿಲಿಟಿಯಂತಹ ಸಿನಿಮಾಗಳ ಮೂಲಕ ಭಾರತ ಸೇರಿ ಜಗತ್ತಿ ನಾದ್ಯಂತ...

ಲಂಡನ್: ಹ್ಯಾರಿಪಾಟರ್, ಡೈಹಾರ್ಡ್, ಸೆನ್ಸ್ ಅಂಡ್ ಸೆನ್ಸಿಬಿಲಿಟಿಯಂತಹ ಸಿನಿಮಾಗಳ ಮೂಲಕ ಭಾರತ ಸೇರಿ ಜಗತ್ತಿ ನಾದ್ಯಂತ ಸಿನಿಮಾಪ್ರಿಯರ ಮನಗೆದ್ದಿದ್ದ ಬ್ರಿಟಿಷ್ ನಟ ಅಲನ್ ರಿಕ್‍ಮನ್ ನಿಧನರಾಗಿದ್ದಾರೆ.
ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 69 ವರ್ಷದ ಹಿರಿಯ ನಟ ಕಳೆದ ಮೂವತ್ತು ವರ್ಷಗಳಿಂದ ಹಾಲಿವುಡ್ ಸಿನಿಮಾ, ಬ್ರಿಟಿಷ್ ರಂಗಭೂಮಿ, ಟಿವಿ ಧಾರಾವಾಹಿಗಳಲ್ಲಿ ನಟನೆ, ನಿರ್ದೇಶನದ ಮೂಲಕ ಜನಪ್ರಿಯತೆ ಗಳಿಸಿದ್ದರು. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ರಿಕ್‍ಮನ್, ಅತ್ಯಂತ ತಮ್ಮ ಪ್ರೌಢ ಅಭಿನಯವಷ್ಟೇ ಅಲ್ಲದೆ, ಸಭ್ಯ ನಡವಳಿಕೆಗೂ ಹಾಲಿವುಡ್ ನಲ್ಲಿ ಹೆಸರಾಗಿದ್ದರು. ತಮ್ಮ ವಿಶಿಷ್ಟ ಸಂಭಾಷಣಾ ಶೈಲಿ, ಮಾತುಗಾರಿಕೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಅವರಿಗೆ ಹ್ಯಾರಿ ಪಾಟರ್ ಸರಣಿಯ ಪ್ರೊಫೆಸರ್ ಸ್ನಾಪ್ ಪಾತ್ರ ಜನಪ್ರಿಯತೆ ತಂದುಕೊಟ್ಟಿತ್ತು.
1988ರಲ್ಲಿ ತೆರೆಕಂಡ ಡೈ ಹಾರ್ಡ್ ಸಿನಿ ಮಾದ ಹಾನ್ಸ್ ಗ್ರುಬರ್ ಪಾತ್ರ ಅವರಿಗೆ ಮೊದಲ ಬಾರಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿತ್ತು. ಅವರ ಇತ್ತೀಚಿನ ಸಿನಿಮಾ ಗ್ಯಾಂಬಿಟ್, ದ ಬಟ್ಲರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT