ಪಶ್ಚಿಮ ಆಫ್ರಿಕಾದ ಫಾಸೊದಲ್ಲಿ ಉಗ್ರರ ದಾಳಿ: 20 ಮಂದಿ ಸಾವು
ಬುರ್ಕಿನಾ ಫಾಸೊದ ವಾಗಡೂಗು ನಗರದ ಹೊಟೇಲ್ ಒಂದರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ...
ಬುರ್ಕಿನಾ ಫಾಸೊ(ಆಫ್ರಿಕಾ): ಬುರ್ಕಿನಾ ಫಾಸೊದ ವಾಗಡೂಗು ನಗರದ ಹೊಟೇಲ್ ಒಂದರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ.
ಪಶ್ಚಿಮ ಆಫ್ರಿಕಾದ ಬುರ್ಕಿನಾ ರಾಜಧಾನಿ ಫಾಸೊ ದೇಶದ ಪ್ರಮುಖ ಹೊಟೇಲ್ ಸ್ಪೇನ್ಡಿಡ್ ನಲ್ಲಿ ಅಲ್ ಖೈದಾ ಭಯೋತ್ಪಾದನೆ ಸಂಘಟನೆ ಮುಸುಕುಧಾರಿ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 20 ಮಂದಿ ಮೃತಪಟ್ಟಿದ್ದು, 15 ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.
ಉಗ್ರ ದಾಳಿ ನಡೆಯುತ್ತಿದ್ದಂತೆ ಬುರ್ಕಿನಾ ಭದ್ರತಾ ಪಡೆಗಳು ಹೊಟೇಲ್ ಸುತ್ತುವರೆದಿದ್ದು, ಕಾರ್ಯಾಚರಣೆ ಕೈಗೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.