ವಿದೇಶ

ಇರಾನ್ ದಿಗ್ಬಂಧನ ತೆರವು: ತೈಲ ದರ ಇನ್ನಷ್ಟು ಅಗ್ಗ?

Mainashree
ಜುಲೈ 2012ರವರೆಗೂ ಇರಾನ್‍ನಿಂದ ಅತಿ ಹೆಚ್ಚು ತೈಲ ಖರೀದಿಸುತ್ತಿರುವ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿತ್ತು. ಐರೋಪ್ಯ ಒಕ್ಕೂಟವು ಇರಾನ್ ಮೇಲೆ ದಿಗ್ಬಂಧನ ವಿಧಿಸಿದ ಸಂದರ್ಭದಲ್ಲಿ ಭಾರತವು ಶೇ.13ರಷ್ಟು ತೈಲಕ್ಕೆ ಇರಾನ್ ಅನ್ನು ಅವಲಂಬಿಸಿತ್ತು. 
ಅಮೆರಿಕದ ದಿಗ್ಬಂಧನ ಘೋಷಣೆಯಾದ ಬಳಿಕ ಈ ಪ್ರಮಾಣವು ಶೇ.11ಕ್ಕೆ ಬಂದಿತ್ತು. ಆರಂಭದಲ್ಲಿ ಭಾರತವು ಅಮೆರಿಕದ ದಿಗ್ಬಂಧವನ್ನು ನಿರ್ಲಕ್ಷಿಸಿತ್ತಾದರೂ, ನಂತರ ಒತ್ತಡ ಹಾಗೂ ಬೆದರಿಕೆಗೆ ಮಣಿದು ಇರಾನ್‍ನೊಂದಿಗಿನ ಸಂಬಂಧ ಕಡಿತ ಗೊಳಿಸಿತು. ಅಷ್ಟೇ ಅಲ್ಲ, ಇರಾನ್‍ಗೆ ಕೊಡಲು ಬಾಕಿಯಿದ್ದ ಮೊತ್ತವನ್ನು ಪಾವತಿಸಲೂ ಭಾರತಕ್ಕೆ ಈ ದಿಗ್ಬಂಧ ಅಡ್ಡಿಯಾಗಿತ್ತು. ದಿಗ್ಬಂಧನ ತೆರವಾದ ಕಾರಣ, ಇನ್ನು ಇರಾನ್ ತನಗೆ ಬೇಕಾದಷ್ಟು ಕಚ್ಚಾತೈಲವನ್ನು ವಿಶ್ವಕ್ಕೆ ರಫ್ತು ಮಾಡಬಹುದು. 
ತಾನು ದಿನಕ್ಕೆ 5 ಲಕ್ಷ ಬ್ಯಾರೆಲ್‍ನಷ್ಟು ತೈಲ ಮಾರಾಟ ಹೆಚ್ಚಿಸುವುದಾಗಿ ಈಗಾಗಲೇ ಇರಾನ್ ಘೋಷಿಸಿದ್ದು, ಮುಂದಿನ ವರ್ಷದೊಳಗಾಗಿ 2.5 ದಶಲಕ್ಷ ಬ್ಯಾರೆಲ್ ತೈಲ ರಫ್ತಾಗಲಿದೆ. ಇದರಿಂದ ಕಚ್ಚಾ ತೈಲದ ಬೆಲೆ ಇನ್ನಷ್ಟು ಇಳಿಮುಖವಾಗಲಿದೆ. ಅಷ್ಟೇ ಅಲ್ಲದೆ, ಗ್ರಾಹಕರನ್ನು ಸೆಳೆಯುವ ಸಲು ವಾಗಿ ಇರಾನ್ ತೈಲ ದರದಲ್ಲಿ ರಿಯಾಯಿತಿಯನ್ನೂ ಘೋಷಿಸುವ ಸಾಧ್ಯತೆಯಿದೆ. 
ಜತೆಗೆ, ಸೌದಿ ಅರೇಬಿಯಾದೊಂದಿಗೆ ಇರಾನ್ ಪೈಪೋಟಿಗೆ ಬೀಳುವ ಕಾರಣ, ಭಾರತದಂತಹ ತೈಲದಾಹಿ ದೇಶಗಳಿಗೆ ಮುಂದಿನ ದಿನಗಳಲ್ಲಿ ಅತ್ಯಂತ ಅಗ್ಗದ ದರದಲ್ಲಿ ತೈಲ ಪ್ರಾಪ್ತಿಯಾಗಲಿದೆ.
SCROLL FOR NEXT