ಸಂಗ್ರಹ ಚಿತ್ರ 
ವಿದೇಶ

ಇಸಿಸ್ ನಿಂದ 300 ಮಂದಿ ಹತ್ಯೆ: 400 ಮಹಿಳೆಯರು, ಮಕ್ಕಳ ಅಪಹರಣ

ಸಿರಿಯಾ ಪಡೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಐಎಸ್ ಉಗ್ರ ಸಂಘಟನೆ 300 ಮಂದಿ ನಾಗರಿಕರನ್ನು...

ಬೇರುತ್/ಲಂಡನ್: ಸಿರಿಯಾ ಪಡೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಐಎಸ್ ಉಗ್ರ ಸಂಘಟನೆ 300 ಮಂದಿ ನಾಗರಿಕರನ್ನು ಹತ್ಯೆ ಮಾಡಿದೆ. ಈ ಬಗ್ಗೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ಡೇರ್ -ಅಲ್-ಜೋರ್ ಎಂಬ ಪ್ರಾಂತ್ಯದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ `ಸನಾ' ವರದಿ ಮಾಡಿದೆ. 
ಅಸುನೀಗಿದವರಲ್ಲಿ ಹೆಚ್ಚಿನವರು ವೃದ್ಧರು, ಮಹಿಳೆಯರು, ಮಕ್ಕಳು ಎಂದು ಅದು ವರದಿ ಮಾಡಿದೆ. ಗುಂಡು ಹಾರಿಸಿ ಅಥವಾ ಶಿರಚ್ಛೇದ ಮಾಡಿ ಅವರನ್ನು ಕೊಂದಿದ್ದಾರೆ. ಸೈನಿಕರ ಕುಟುಂಬ ವರ್ಗದರನ್ನೇ ಹತ್ಯೆ ಮಾಡಲಾಗಿದೆ. ಆದರೆ ಬ್ರಿಟನ್ ನ ಮಾನವ ಹಕ್ಕು ಸಂಘಟನೆ ಪ್ರಕಾರ ಮೃತರ ಸಂಖ್ಯೆ 135 ಮಾತ್ರ.
400 ಮಂದಿ ಅಪಹರಣ: ಈ ಘಟನೆ ಬಳಿಕ ಐಎಸ್ ಮಹಿಳೆಯರು, ಮಕ್ಕಳು ಸೇರಿ 400 ಮಂದಿ ಸಿರಿಯಾ ನಾಗರಿಕರನ್ನು ಅಪಹರಿಸಿದೆ ಎಂದು `ಡೈಲಿ ಮೇಲ್' ವರದಿ ಮಾಡಿದೆ. ಇದೇ ವೇಳೆ, ಐಎಸ್ ಪರ ಕೆಲಸ ಮಾಡುತ್ತಿದ್ದ 100 ಮಂದಿ ಬ್ರಿಟನ್ ನಾಗರಿಕರು ಸಿರಿಯಾ, ಇರಾಕ್‍ನಲ್ಲಿ ಅಸುನೀಗಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!