ನೇಪಾಳಕ್ಕೆ ಆಂಬುಲೆನ್ಸ್ ಹಾಗೂ ಬಸ್ ಗಳ ಉಡುಗೊರೆ ನೀಡಿದ ಭಾರತ 
ವಿದೇಶ

ನೇಪಾಳಕ್ಕೆ ಆಂಬುಲೆನ್ಸ್ ಹಾಗೂ ಬಸ್ ಗಳ ಉಡುಗೊರೆ ನೀಡಿದ ಭಾರತ

67 ನೇ ಗಣರಾಜ್ಯೋತ್ಸವದ ಅಂಗವಾಗಿ ಭಾರತ ಸರ್ಕಾರ ನೇಪಾಳದ ವಿವಿಧ ಸಂಘ-ಸಂಸ್ಥೆಗಳಿಗೆ 40 ಆಂಬುಲೆನ್ಸ್ ಹಾಗೂ 8 ಬಸ್ ಗಳನ್ನು ಉಡುಗೊರೆಯಾಗಿ ನೀಡಿದೆ.

ಕಠ್ಮಂಡು: 67 ನೇ ಗಣರಾಜ್ಯೋತ್ಸವದ ಅಂಗವಾಗಿ ಭಾರತ ಸರ್ಕಾರ ನೇಪಾಳದ ವಿವಿಧ ಸಂಘ-ಸಂಸ್ಥೆಗಳಿಗೆ 40 ಆಂಬುಲೆನ್ಸ್ ಹಾಗೂ 8 ಬಸ್ ಗಳನ್ನು ಉಡುಗೊರೆಯಾಗಿ  ನೀಡಿದೆ.

ಭಾರತದ ರಾಯಭಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನೇಪಾಳದಲ್ಲಿರುವ ಭಾರತದ ರಾಯಭಾರಿ ರಂಜಿತ್ ರೇ, ವಾಹನಗಳ ಕೀಲಿಗಳನ್ನು ಅಲ್ಲಿನ ವಿವಿಧ ಸಂಘಟನೆಗಳಿಗೆ ಹಸ್ತಾಂತರಿಸಿದ್ದಾರೆ. ಆಂಬುಲೆನ್ಸ್ ಹಾಗೂ ಬಸ್ ಗಳೊಂದಿಗೆ 52 ಗ್ರಂಥಾಲಯ, ಶಾಲೆ, ತರಬೇತಿ ಸಂಸ್ಥೆಗಳಿಗೆ ಅಗತ್ಯವಿರುವ ಪುಸ್ತಕಗಳನ್ನೂ ಸಹ ನೇಪಾಳಕ್ಕೆ ಉಡುಗೊರೆಯಾಗಿ ನೀಡಲಾಗಿದೆ.  
ಇದೇ ವೇಳೆ ನೇಪಾಳದ ನಿವೃತ್ತ ಯೋಧರು, ಅಂಗವಿಕಲ ಯೋಧರು ಹಾಗೂ ಅವರನ್ನು ಅವಲಂಬಿಸಿರುವವರಿಗೆ ನಗದು ರೂಪದಲ್ಲಿ ಪ್ರೋತ್ಸಾಹಧನವನ್ನೂ ನೀಡಲಾಗಿದೆ. ಭಾರತದ ರಾಯಭಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳೂ ಸೇರಿ 2 ,500 ಮಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನ: ಏರ್ ಶೋ ನಡೆಸಲು ಚಿಂತನೆ

ಬೆಳಗಾವಿ ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ ನಿಕ್ಕಂ ಅಧಿಕಾರ ಸ್ವೀಕಾರ

ತೈಲ ಖರೀದಿಸುವುದು ಅಥವಾ ಖರೀದಿಸದಿರುವುದು ಉಕ್ರೇನ್ ಯುದ್ಧವನ್ನು ಪರಿಹರಿಸುವುದಿಲ್ಲ: ಕೈವ್‌ನಲ್ಲಿ ರಾಜತಾಂತ್ರಿಕತೆಗೆ EAM ಜೈಶಂಕರ್ ಕರೆ

3 ದಿನಗಳ ವಿಧಾನಮಂಡಲ ಅಧಿವೇಶನ: ಬರ, ಕಸ್ತೂರಿ ರಂಗನ್ ವರದಿ ಬಗ್ಗೆ ಮಹತ್ವದ ಚರ್ಚೆ