ಭಾರತೀಯ ಅಮೆರಿಕನ್ನರಿಂದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೊಲಾಲ್ಡ್ ಟ್ರಂಪ್ ಗೆ ಬೆಂಬಲ
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಡೊಲಾಲ್ಡ್ ಟ್ರಂಪ್ ಅವರನ್ನು ಅಲ್ಲಿನ ಅನಿವಾಸಿ ಭಾರತೀಯರು ಅಮೆರಿಕದ ಭರವಸೆ ಎಂದು ಹೇಳಿದೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಡೊಲಾಲ್ಡ್ ಟ್ರಂಪ್ ಅವರನ್ನು ಅಲ್ಲಿನ ಅನಿವಾಸಿ ಭಾರತೀಯರು ಅಮೆರಿಕದ ಭರವಸೆ ಎಂದು ಹೇಳಿದ್ದು, ಡೊನಾಲ್ಡ್ ಅವರನ್ನು ಬೆಂಬಲಿಸಲು ಸಂಘಟನೆಯೊಂದನ್ನು ಪ್ರಾರಂಭಿಸಿದ್ದಾರೆ.
ನ್ಯೂಯಾರ್ಕ್ ನ ಟ್ರೈಸ್ಟೇಟ್ ನಲ್ಲಿ ಅಮೆರಿಕದ ಭಾರತೀಯರು ಪೊಲಿಟಿಕಲ್ ಆಕ್ಷನ್ ಸಮಿತಿ(ಪಿಎಸಿ) ಯನ್ನು ಪ್ರಾರಂಭಿಸಿದ್ದು, ಡೊನಾಲ್ಡ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಸೆಟಾನ್ ಹಾಲ್ ವಿಶ್ವವಿದ್ಯಾಲಯದ ಬ್ಯುಸಿನೆಸ್ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ.ಎ.ಡಿ ಅಮರ್ ಈ ಸಮಿತಿಯನ್ನು ಪ್ರಾರಂಭಿಸಿದ್ದು, ಫೆಡರಲ್ ಚುನಾವಣಾ ಆಯೋಗದಲ್ಲಿ ಇಂಡಿಯನ್ ಅಮೆರಿಕನ್ಸ್ ಫಾರ್ ಟ್ರಂಪ್ -2016 ನ್ನು ಕಳೆದ ವಾರ ನೋಂದಣಿ ಮಾಡಿದ್ದಾರೆ.
ಟ್ರಂಪ್ ಅವರನ್ನು ಅಮೆರಿಕದ ಅಧ್ಯಕ್ಷೀಯ ಹುದ್ದೆಗೆ ಆಯ್ಕೆ ಮಾಡಲು ಅಮೆರಿಕನ್ನರ, ಪ್ರಮುಖವಾಗಿ ಭಾರತೀಯ ಅಮೆರಿಕನ್ನರ ಬೆಂಬಲ ಪಡೆಯುವುದು ಈ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ಪಿಎಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.