ಇಸ್ಲಾಮಾಬಾದ್: ಭಾರತ- ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೇಲೆ ಪಠಾಣ್ ಕೋಟ್ ದಾಳಿ ಕರಿನೆರಳು ಬೀರಿದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಒಪ್ಪಿದ್ದಾರೆ.
ಭಯೋತ್ಪಾದಕ ದಾಳಿಯಿಂದ ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಧಕ್ಕೆ ಉಂತಾಗಿದೆ ಎಂದು ಇದೇ ಮೊದಲ ಬಾರಿಗೆ ಪಾಕಿಸ್ತಾನ ಒಪ್ಪಿಕೊಂಡಿದೆ. ಪಠಾಣ್ ಕೋಟ್ ದಾಳಿಯಲ್ಲಿ ಪಾಕ್ ಉಗ್ರರ ಕೈವಾಡ ಇರುವುದರ ಬಗ್ಗೆ ಭಾರತ ಸರ್ಕಾರ ಸ್ಪಷ್ಟ ಹಾಗೂ ಕ್ರಮ ಕೈಗೊಳ್ಳಬಹುದಾದ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದೆ.
ದಾಳಿಯ ಹಿಂದೆ ಜೈಶ್-ಇ- ಮೊಹಮ್ಮದ್ ಸಂಘಟನೆಯ ಉಗ್ರ ಮೌಲಾನ ಮಸೂದ್ ಅಜರ್ ಕೈವಾಡ ಇರುವುದರ ಬಗ್ಗೆ ಮಾಹಿತಿ ನೀದಿದ್ದರೂ ಪಾಕಿಸ್ತಾನ ಈ ವರೆಗೆ ಉಗ್ರನ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಮೌಲಾನಾ ಮಸೂದ್ ಅಜರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಭಾರತ ಹೇಳಿದೆ.