ಇಸ್ಲಾಮಾಬಾದ್: ಪಠಾಣ್‌ಕೋಟ್ ಉಗ್ರ ದಾಳಿ ಭಾರತ-ಪಾಕಿಸ್ತಾನ ಮಾತುಕತೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಹೇಳಿದ್ದಾರೆ.
ಪಠಾಣ್‌ಕೋಟ್ ದಾಳಿಯಿಂದಾಗಿ ಭಾರತ-ಪಾಕ್ ಮಾತುಕತೆ ವಿಳಂಬವಾಗುತ್ತಿದೆ ಎಂಬ ಸತ್ಯವನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ.
ಏಳು ಭಾರತೀಯ ಯೋಧರನ್ನು ಬಲಿ ಪಡೆದ ಜನವರಿ 1ರಂದು ನಡೆದ ಪಠಾಣ್‌ಕೋಟ್ ಉಗ್ರ ದಾಳಿಗೆ ಸಂಬಂಧಿಸಿದಂತೆ ಭಾರತ ನಿರ್ಧಿಷ್ಟವಾದ ಮತ್ತು ಕ್ರಮ ತೆಗೆದುಕೊಳ್ಳಬಹುದಾದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಒದಗಿಸಿದ್ದರೂ ಪಾಕ್ ಇದುವರೆಗೊ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆಯನ್ನು ಅನಿರ್ಧಿಷ್ಟವಧಿಗೆ ಮುಂದೂಡಲಾಗಿದೆ.
ಪಠಾಣ್‌ಕೋಟ್ ಉಗ್ರ ದಾಳಿ ಹಿಂದೆ ಜೈಷ್-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನ್ ಮಸೂದ್ ಅಜರ್ ಕೈವಾಡ ಇದೆ ಎಂದು ಭಾರತ ಆರೋಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics