ಮದರಸಾ 
ವಿದೇಶ

ಪೇಶಾವರ ದಾಳಿ ಬಳಿಕ 182 ಮದರಸಾಗಳಿಗೆ ಬೀಗ ಜಡಿದ ಪಾಕ್

ಪೇಶಾವರ ಸೇನಾಶಾಲೆ ಮೇಲಿನ ಭಯೋತ್ಪಾದಕರ ಭೀಕರ ದಾಳಿ ಬಳಿಕ ಪಾಕಿಸ್ತಾನ ಇಲ್ಲಿಯವರೆಗೂ 182 ಮದರಸಾಗಳಿಗೆ ಬೀಗ ಜಡಿದಿದೆ...

ಇಸ್ಲಾಮಾಬಾದ್: ಪೇಶಾವರ ಸೇನಾಶಾಲೆ ಮೇಲಿನ ಭಯೋತ್ಪಾದಕರ ಭೀಕರ ದಾಳಿ ಬಳಿಕ ಪಾಕಿಸ್ತಾನ ಇಲ್ಲಿಯವರೆಗೂ 182 ಮದರಸಾಗಳಿಗೆ ಬೀಗ ಜಡಿದಿದೆ.

ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ಪಂಜಾಬ್, ಸಿಂಧ್ ಹಾಗೂ ಖೈಬರ್ ಫಖ್ತುಂಖ್ವಾದಲ್ಲಿನ ಮದರಸಾಗಳನ್ನು ಮುಚ್ಚಲಾಗಿದೆ ಎಂದು ಎಪಿಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

2014ರ ಪೇಶಾವರ ಸೇನಾ ಶಾಲೆ ಮೇಲಿನ ಉಗ್ರರ ದಾಳಿ ಬಳಿಕ ಅಸ್ತಿತ್ವಕ್ಕೆ ಬಂದಿರುವ ಭಯೋತ್ಪಾದನೆ ವಿರುದ್ಧದ ರಾಷ್ಟ್ರೀಯ ಕಾರ್ಯ ಯೋಜನೆ(ಎನ್‌ಎಪಿ) ಅಡಿಯಲ್ಲಿ ಈ ಕ್ರಮ ಕೈಗೊಂಡಿದ್ದು, ಉಗ್ರರ ಆರ್ಥಿಕ ನೆರವಿಗೆ ಪೆಟ್ಟು ನೀಡುವ ಯತ್ನವಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನವು ಉಗ್ರ ಸಂಘಟನೆಗಳ ನಂಟಿರುವ 126 ಖಾತೆಗಳ ಒಂದು ಶತಕೋಟಿ ಪಾಕ್‌ ರೂಪಾಯಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಕಾನೂನು ಪಾಲನಾ ಪಡೆಗಳು ಈವರೆಗೂ 25.1 ಕೋಟಿ ಪಾಕಿಸ್ತಾನ ರೂಪಾಯಿ ನಗದು ವಶಕ್ಕೆ ಪಡೆದಿವೆ.

ಒಟ್ಟಾರೆ 1,026 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪಾಕಿಸ್ತಾನ ಸರ್ಕಾರ 230 ಶಂಕಿತ ಉಗ್ರರನ್ನು ಬಂಧಿಸಿದೆ. ಪಾಕಿಸ್ತಾನದಲ್ಲಿ 64 ನಿಷೇಧಿತ ಸಂಘಟನೆಗಳಿವೆ. ವಿಶ್ವಸಂಸ್ಥೆಯು ಪಾಕಿಸ್ತಾನದ 74 ಸಂಘಟನೆಗಳನ್ನು ಅಕ್ರಮ ಎಂದು ಘೋಷಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT