ವಿದೇಶ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಮಾನವತಾವಾದಿ ಎಲಿಯೆ ವೀಸೆಲ್ ನಿಧನ

Sumana Upadhyaya
ನ್ಯೂಯಾರ್ಕ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ರೊಮಾನಿಯಾದಲ್ಲಿ ಹುಟ್ಟಿ ಹತ್ಯಾಕಾಂಡದಲ್ಲಿ ಬದುಕುಳಿದ ವಿಶ್ವ ಕಂಡ ಅದ್ಭುತ ಮಾನವತಾವಾದಿ ಎಲಿಯೆ ವೀಸೆಲ್ ನಿನ್ನೆ (ಶನಿವಾರ) ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. 
ಅವರ ನೈಟ್ ಕೃತಿ ನಾಝಿಗಳ ಅಪರಾಧದಲ್ಲಿ ಒಂದು ಮಹತ್ವದ ಹೆಜ್ಜೆಗುರುತಾಗಿದೆ. ಅವರ ಸಾವಿನ ಬಗ್ಗೆ ಇಸ್ರೇಲ್ ನ ಯಾದ್ ವಶೆಮ್ ಹೊಲೊಕೌಸ್ಟ್ ಮೆಮೋರಿಯಲ್ ಘೋಷಿಸಿತ್ತು. ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.
ಎಲಿಯೆ ವೀಸೆಲ್ ನಿಧನಕ್ಕೆ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ವಿಶ್ವದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
SCROLL FOR NEXT