ಲಂಡನ್: ಬ್ರೆಕ್ಸಿಟ್ ಚಳುವಳಿಯ ಮುಂಚೂಣಿಯ ನಾಯಕ ಎಂಇಪಿ ನಿಗೇಲ್ ಫರಾಜ್ ಅವರು ಯುನೈಟೆಡ್ ಕಿಂಗ್ ಡಮ್ ಇಂಡಿಪೆಂಡೆನ್ಸ್ ಪಾರ್ಟಿ(ಯುಕೆಐಪಿ) ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದಾರೆ.
ನಿಗೇಲ್ ಫರಾಜ್ ಐರೋಪ್ಯ ಒಕ್ಕೂಟದಿಂದ ನಿರ್ಗಮಿಸುವವರ ಪರ ಮತದಾನ ಮಾಡಿದ್ದರು. ಇದೀಗ ಯುಕೆಐಪಿ ನಾಯಕತ್ವದಿಂದ ಕೆಳಗಿಳಿಯಲು ನಾನು ನಿರ್ಧರಿಸಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಫರಾಜ್ ಪ್ರಕಟಿಸಿದ್ದಾರೆ.
52 ವರ್ಷದ ಫರಾಜ್ ಬ್ರೆಕ್ಸಿಟ್ ಪರವಾಗಿ ಜನಮತಗಣನೆಯಲ್ಲಿ ಜನಾದೇಶ ಲಭಿಸಿರುವುದರಿಂದ ನನ್ನ ರಾಜಕೀಯ ಮಹತ್ವಾಕಾಂಕ್ಷೆಯ ಸಾಧನೆಯಾಗಿದೆ ಎಂದು ಅರ್ಥ. ಬ್ರೆಕ್ಸಿಟ್ ಪ್ರಚಾರಾಂದೋಲನ ಕಾಲದಲ್ಲಿ ನಾನು ನನ್ನ ರಾಷ್ಟ್ರ ನನಗೆ ಮರಳಿ ಬೇಕು ಎಂದು ಹೇಳಿದ್ದೆ. ಈಗ ನಾನು ನನ್ನ ಬದುಕು ನನಗೆ ಮರಳಿ ಬೇಕು ಎಂದು ಹೇಳುತ್ತಿದ್ದೇನೆ. ಅದು ಈಗ ಆರಂಭವಾಗುತ್ತಿದೆ ಎಂದು ಹೇಳಿದ್ದಾರೆ.