ಸಾಂದರ್ಭಿಕ ಚಿತ್ರ 
ವಿದೇಶ

ಒಲಂಪಿಕ್ಸ್ ವೇಳೆಯಲ್ಲಿ ಯಾವುದೇ ದಾಳಿಗೆ ಪ್ರತಿಕ್ರಿಯಿಸಲಿದ್ದೇವೆ: ಬ್ರೆಜಿಲ್

ಯಾವುದೇ ದಾಳಿಗೂ ಅದರಲ್ಲೂ ಆಗಸ್ಟ್ 5 ರಿಂದ ಪ್ರಾರಂಭವಾಗುವ 2016 ರ ಒಲಂಪಿಕ್ಸ್ ಕೂಟದ ಸಮಯದ ಯಾವುದೇ ದಾಳಿಗೆ ಪ್ರತಿಕ್ರಿಯಿಸುವುದಕ್ಕೆ ಹಿಂಜರಿಯುವುದಿಲ್ಲ

ರಿಯೋ ಡಿ ಜೆನೆರೋ: ಯಾವುದೇ ದಾಳಿಗೂ ಅದರಲ್ಲೂ ಆಗಸ್ಟ್ 5 ರಿಂದ ಪ್ರಾರಂಭವಾಗುವ 2016 ರ ಒಲಂಪಿಕ್ಸ್ ಕೂಟದ ಸಮಯದ ಯಾವುದೇ ದಾಳಿಗೆ ಪ್ರತಿಕ್ರಿಯಿಸುವುದಕ್ಕೆ ಹಿಂಜರಿಯುವುದಿಲ್ಲ ಎಂದು ಬ್ರೆಜಿಲ್ ಭದ್ರತಾ ಸಚಿವ ರೌಲ್ ಜಂಗ್ಮನ್ ಹೇಳಿದ್ದಾರೆ. 
"ಬ್ರೆಜಿಲ್ ಶಾಂತಿಯುತ ರಾಷ್ಟ್ರ ಆದರೆ ನಾವು ಶಸ್ತ್ರಾಸ್ತ್ರರಹಿತ ರಾಷ್ಟ್ರವಲ್ಲ. ನಮ್ಮನ್ನು ರಕ್ಷಿಸಿಕೊಳ್ಳುವ ಮತ್ತು ಹೋರಾಡುವುದು ನಮಗೆ ತಿಳಿದಿದೆ. ನಮಗೆ ಯಾರಾದರೂ ಸವಾಲೆಸೆದರೆ ಬಿಡುವಿಲ್ಲದೆ ಪ್ರತಿಕ್ರಿಯಿಸಲಿದ್ದೇವೆ" ಎಂದು ಜಂಗ್ಮನ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. 
ಒಲಂಪಿಕ್ಸ್ ಆಟಗಳ ಸಮಯದಲ್ಲಿ ಭದ್ರತೆಯನ್ನು ಪರಿಶೀಲಿಸಲು ಒಲಂಪಿಕ್ ಗ್ರಾಮಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಸಚಿವರು ಮಾತನಾಡಿದ್ದಾರೆ. 
ರಿಯೋ ಡಿ ಜೆನೆರೋ ಒಲಂಪಿಕ್ಸ್ ಕೂಟದ ಸಮಯದಲ್ಲಿ 21000 ಭದ್ರತಾ ಶಸ್ತ್ರಾಸ್ತ್ರ ಸಿಬ್ಬಂದಿ ಮತ್ತು 64000 ಪೊಲೀಸ್ ಸಿಬ್ಬಂದಿ ಪರಿವೀಕ್ಷಣೆ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video