ವಿದೇಶ

ಕಮ್ಯುನಿಷ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್

Srinivas Rao BV

ಕಠ್ಮಂಡು: ಕೆಪಿ ಶರ್ಮಾ ಓಲಿ ನೇತೃತ್ವದ ನೇಪಾಳ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಅಲ್ಲಿನ ಕಮ್ಯುನಿಷ್ಟ್ ಪಕ್ಷ (ಸಿಪಿಎನ್) ವಾಪಸ್ ಪಡೆದಿದ್ದು ನೇಪಾಳದ ಸರ್ಕಾರದ ಅಲ್ಪಮತಕ್ಕೆ ಕುಸಿದಿದೆ.

ನೇಪಾಳದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರಕ್ಕೆ ಪುಷ್ಪಕಮಲ್  ದಹಾಲ್‌ (ಪ್ರಚಂಡ) ನೇತೃತ್ವದ ಯುಸಿಪಿಎನ್‌ಎಂ ಪಕ್ಷ ಬೆಂಬಲ ನೀಡಿತ್ತು. ಆದರೆ ಯುಸಿಪಿಎನ್‌ಎಂ ಪಕ್ಷದ ಸಭೆ ನಡೆಸಿದ ನಂತರ ಪುಷ್ಪಕಮಲ್ ಕೆಪಿ ಓಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುತ್ತಿರುವ ನಿರ್ಧಾರವನ್ನು ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ, ಪ್ರಧಾನಿ ಕೆಪಿ ಶರ್ಮಾ ಓಲಿ ಹಾಗೂ ನೇಪಾಳ ಸಂಸತ್ ನ ಪ್ರತಿನಿಧಿ ಸಭೆಯ ಅಧ್ಯಕ್ಷರಿಗೆ ಪತ್ರದ ಮೂಲಕ ತಿಳಿಸಲಾಗಿದೆ ಎಂದು ಪುಷ್ಪಕಮಲ್ ದಹಾಲ್ ಮಾಹಿತಿ ನೀಡಿದ್ದಾರೆ. ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದ ಬಗ್ಗೆ ಪುಷ್ಪಕಮಲ್ ದಹಾಲ್ ಅವರ ಪತ್ರಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಕೆಪಿ ಶರ್ಮಾ ಓಲಿ, ಹೊಸ ಸರ್ಕಾರಕ್ಕೆ ಶುಭಶಯಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

SCROLL FOR NEXT