ಇಸ್ಲಾಮಾಬಾದ್: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತನ್ನ ಸೆಕ್ಸಿ ಹಾಗೂ ಬೋಲ್ಡ್ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಮಾಡೆಲ್ ಕಂದೀಲ್ ಬಲೋಚ್ ಮರ್ಯಾದಾ ಹತ್ಯೆ ಕುರಿತಂತೆ ಪಾಕಿಸ್ತಾನದಲ್ಲಿ ಒಂದೆಡೆ ಖಂಡನೆ ಹಾಗೂ ಮತ್ತೊಂದೆಡೆ ಸಂಭ್ರಮಾಚರಣೆ ನಡೆಯುತ್ತಿವೆ.
ಕಂದೀಲ್ ಸಾವು ಇದೀಗ ಪಾಕಿಸ್ತಾನದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಕಂದೀಲ್ ಸಾವನ್ನು ಅವರ ಅಭಿಮಾನಿಗಳು ಟ್ವೀಟ್ ಮಾಡಿ ಖಂಡಿಸುತ್ತಿದ್ದರೆ, ಮತ್ತೊಂದೆಡೆ ಕೆಲವರು ಸಂಭ್ರಮಿಸುತ್ತಿದ್ದಾರೆ.
ಫೇಸ್ ಬುಕ್ ನಲ್ಲಿ ತನ್ನ ಬೋಲ್ಡ್ ಸೆಲ್ಫಿಗಳನ್ನು ಅಪ್ ಲೋಡ್ ಮಾಡುತ್ತಾ ಸುಮಾರು 10 ಸಾವಿರಕ್ಕೂ ಹೆಚ್ಚು ಬೆಂಬಲಿಗರನ್ನು ಹೊಂದಿದ್ದ ಕಂದೀಲ್ ಬಲೋಜ್ ಟಿ20 ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದ್ದರೆ ತಾನು ನಗ್ನಳಾಗುವುದಾಗಿ ಘೋಷಿಸಿ ಪ್ರಸಿದ್ಧಿಯಾಗಿದ್ದಳು. ಇಂತಹ ಸೆಕ್ಸಿ ಇಮೇಜ್ ಕೊನೆಗೆ ಅವಳ ಸಾವಿಗೆ ಕಾರಣವಾಗಿದೆ. ಮುಸ್ಲಿಂ ಧರ್ಮದವಳಾಗಿದ್ದು ತನ್ನ ಅಕ್ಕ ಇಂತಹ ಕೆಲಸ ಮಾಡುತ್ತಿದ್ದಾಳಲ್ಲಾ ಎಂಬ ಆಕ್ರೋಶದಿಂದ ಸಹೋದರನೆ ಕಂದೀಲ್ ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.